ಚಕ್ರೇಶ್ವರಿ ಮಹಿಳಾ ಮಂಡಳಿ, ಅನಗೋಳು-ಬೆಳಗಾವ

ಮಹಿಳಾ ಮಂಡಳಿ ಸ್ಥಾಪನೆ : ಅಕ್ಟೋಬರ್ 1998, ಆದಿನಾಥ ಜಿನ ಮಂದಿರ, ವಿಜಯದಶಮಿಯ ದಿವಸ, ಅನಗೋಳು-ಬೆಳಗಾವ ಸ್ಥಾಪನೆ ಆಗಿರುತ್ತದೆ. 

ನೀವು ಕಳುಹಿಸಿರುವ ಪತ್ರವನ್ನು ಓದಿ ಸಂತೋಷವಾಯಿತು. ಮಹಿಳಾ ಒಕ್ಕೂಟದ ಸ್ಥಾಪನೆ ಆಗಿ 25 ವರ್ಷಗಳು ಆದವು. ನೀವು ತಿಳಿಸಿರುವ ಹಾಗೆ ನಮ್ಮ ಮಹಿಳಾ ಮಂಡಳದ ಚಟುವಟಿಕೆಗಳು ಕೆಳಗಿನಂತಿದೆ. ನಮ್ಮ ಬಸದಿಯಲ್ಲಿ ದಿನನಿತ್ಯ ಪೂಜೆ ಅಭಿಷೇಕ, ಶಾಂತಿ ದಾರಿಗಳು ನಿರಂತರವಾಗಿ ನಡೆಯುತ್ತಿದೆ. ನಮ್ಮದೊಂದು ದಿನ ಭಜನೆ ಮಂಡಳಿ ಇದೆ. ಬಸದಿಯಲ್ಲಿ ಸಾಯಂಕಾಲ ಶ್ರಾವಕರು ಭಗವಂತರ ಸ್ತೋತ್ರ ಸ್ತುತಿ ಆರತಿಯನ್ನು ಮಾಡುತ್ತಾರೆ. ಒಂದು ಸಾಪ್ತಾಹಿಕ ಪಂಚನ್ನು ಮಹಿಳೆಯರೇ ನಡೆಸುತ್ತಾರೆ. ಅನಗೋಳದಲ್ಲಿ ನಡೆಯುತ್ತಿರುವ ಆಗಮ ವಿಷಯದ ಜ್ಞಾನ  ಶಿಬಿರಕ್ಕೆ ಮಕ್ಕಳು ಹೋಗುತ್ತಾರೆ. ಶಾಸ್ತ್ರಗಳಿಂದ ಶ್ರಾವಕಿಯರಿಂದ ಧರ್ಮ ಪ್ರಭಾವನೆ ಆಗುತ್ತದೆ. 

ಮಹಾವೀರ ಜಯಂತಿಯ ಜನ್ಮ ಕಲ್ಯಾಣವನ್ನು ಎರಡು ಬಸದಿಯ ಶ್ರಾವಕರು ಸೇರಿ ಆಚರಿಸುತ್ತೇವೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತೇವೆ. ಆ ದಿವಸ ಪ್ರತಿಷ್ಠಿತ ವ್ಯಕ್ತಿಗಳನ್ನು ಕರೆದು ಸನ್ಮಾನ ಮಾಡುತ್ತೇವೆ. ನಮ್ಮ ಮಹಿಳಾ ಮಂಡಳಿಯ ಸ್ಥಾಪನೆಗೆ ಪ್ರೇರಕರು ಬಾಹುಬಲಿ ಮಹಾರಾಜರ ಶಿಷ್ಯರಾದ ಶ್ರುತದೇವಿ ಅಮ್ಮ. ಸುಜ್ಞಾನಮತಿ ಅಮ್ಮ ಅವರ ಹಸ್ತದಿಂದ ಅವರ ಪ್ರೇರಣೆಯಿಂದ ಸ್ಥಾಪನೆಯಾಗಿದೆ. 

ಇಂತಿ ನಿಮ್ಮ 

ಗೀತಾ ಪ್ರಕಾಶ ಉಪಾಧ್ಯೆ, ಪೋ: 9663454524

ಅರ್ಚನಾ ರಾ ಪಾಟೀಲ್, ಫೋ: 7026965337

Sl No. ID No. Name Designation Contact Number Photo