Members
ಜಿನವಾಣಿ ಮಹಿಳಾ ಮಂಡಲ, ಕವಟಕೊಪ್ಪ
ಅಕ್ಕಾತಾಯಿ ಪಾಟೀಲರವರು 2000 ಇಸವಿಯಲ್ಲಿ ಮಹಿಳಾ ಮಂಡಲದ ಉದ್ಘಾಟನೆಯನ್ನು ಮಾಡಿರುತ್ತಾರೆ. ಇಂದುಮತಿ ಗಾಳಿರವರನ್ನು ಅಧ್ಯಕ್ಷರಾಗಿ ನೇಮಿಸಿರುತ್ತಾರೆ. ಬೆಳಗಾವಿಯಲ್ಲಿ ಭಾರತೀಯ ಸವದತ್ತಿಯವರು ನಡೆಸಿದ ಮಹಿಳಾ ಮಂಡಳದ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡಿದ್ದೆವು. ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದಲ್ಲಿ ಎಲ್ಲರೂ ಕೂಡಿ ಭಾಗವಹಿಸಿದ್ದೆವು. ಐನಾಪುರದ ಕಾರ್ಯಕ್ರಮದಲ್ಲಿ ಪುಷ್ಪ ಉಗಾರೆ ಅವರು ಹೋಗಿದ್ದರು. ಅವರ ಜೊತೆ ಉಳಿದ ಮಹಿಳಾ ಮಂಡಳದವರು ಸೇರಿ ಹೋಗಿದ್ದೆವು.
ದಶಲಕ್ಷಣ ಷೋಡಶ ಕಾರಣ ಪರ್ವದಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ದಸರಾ ಹಬ್ಬದಲ್ಲಿ ಒಂಭತ್ತು ದಿನ ನೃತ್ಯ, ನಾಟಕ ಮುಂತಾದ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ಅಥಣಿಯಲ್ಲಿ ನಡೆದ ಮಹಿಳಾ ಮಂಡಲದ ಕಾರ್ಯಕ್ರಮದಲ್ಲಿ ವಿಜಯ ನಾಡಗೌಡ ಅವರಿಗೆ ಸನ್ಮಾನ ಮಾಡಲಾಯಿತು. ಸುನೀತಾ ಗಾಳಿ, ಅನಂತಮತಿ ನಂದಗಾವ ಅವರು ಏನಾದರೂ ತಪ್ಪಿದ್ದರೆ ತಿಳಿಸಿಕೊಡುತ್ತಾರೆ. ನಮ್ಮ ಮಹಿಳಾ ಮಂಡಲದಲ್ಲಿ 40 ಜನ ಸದಸ್ಯರು ಇರುತ್ತಾರೆ.
ಮಂಡಲವು ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡಿದೆ. ನಮ್ಮ ಸಮಾಜದ ಮುಖಂಡರ ಸಲಹೆ, ಸೂಚನೆಯ ಮೂಲಕ ನಮ್ಮನ್ನು ನಾವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಮುನಿ ಮಹಾರಾಜರು ಬಂದಾಗ ಅವರ ಸೇವೆ ಕಾರ್ಯಕ್ರಮಗಳಲ್ಲಿ ನಮಗೆ ವಹಿಸಿಕೊಟ್ಟ ಕೆಲಸಗಳನ್ನು ಮಾಡುತ್ತೇವೆ. ನಮ್ಮ ಮಂಡಲದಲ್ಲಿ ಪ್ರತಿ ಮಾಸಿಕ ಕಾರ್ಯಕ್ರಮವನ್ನು ಏರ್ಪಡಿಸುತ್ತೇವೆ. ಪ್ರತಿ ತಿಂಗಳು ಒಂದೊಂದು ವಿಷಯದ ಮೇಲೆ ಸಲಹೆಯನ್ನು ಕೊಡುತ್ತೇವೆ. ಗಿಡಗಳನ್ನು ನೆಡುವುದು, ಸ್ತ್ರೀರೋಗ ತಜ್ಞರಿಂದ ಸಲಹೆ, ಉಚಿತ ಆರೋಗ್ಯ ಶಿಬಿರವನ್ನು ಬಸದಿಗಳಲ್ಲಿ, ನವರಾತ್ರಿಯಲ್ಲಿ ದೇವಿ ಅಲಂಕಾರ ಹಾಗೂ ಉಡಿ ತುಂಬುವ ಕಾರ್ಯಕ್ರಮ, ಸಂಕ್ರಾಂತಿಯಲ್ಲಿ ಅರಿಶಿನ-ಕುಂಕುಮ ಮಂಡಳದ ಮಹಿಳೆಯರಿಗಾಗಿ ಇಡುತ್ತೇವೆ. ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬೆಳಗಾವಿಯಲ್ಲಿ ನಮ್ಮ ಮಂಡಳವು ಒಂದು ಒಳ್ಳೆಯ ಹೆಸರನ್ನು ಗಳಿಸಿದೆ.
ಅಧ್ಯಕ್ಷರು ರೋಮ ಗೋಟಡಕಿ, 884992764
ಕಾರ್ಯದರ್ಶಿ ಆರತಿ ಉಮಚಗಿ, 911358487
ಖಜಾಂಚಿ ಮಾಣಿಕ ಕಲಮನಿ, 944946653
ಜಿನವಾಣಿ ಮಹಿಳಾ ಮಂಡಲ ಕವಟಕೊಪ್ಪ – 9741645695
Sl No. | ID No. | Name | Designation | Contact Number | Photo |
---|