Members
ಜ್ವಾಲಾ ಮಾಲಿನಿ ಮಹಿಳಾ ಸಮಾಜ, ಕಳಸ ಮೂಡಿಗೆರೆ
ದಿನಾಂಕ: 07/10/2006 ರಂದು ಪ್ರಾರಂಭಿಸಲಾಯಿತು. ನಮ್ಮ ಮಂಡಳಿಯ ಪ್ರಾರಂಭಿಕ ಅಧ್ಯಕ್ಷರಾಗಿ ಶ್ರೀಮತಿ ಕಸ್ತೂರಿ ವರ್ಧಮಾನ ಇವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿತು. ನಂತರದ ವರ್ಷದಲ್ಲಿ ಶ್ರೀಮತಿ ಕಿರಣ ಬ್ರಹ್ಮದೇವ ಇವರು ನಮ್ಮ ಮಂಡಳಿಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಶ್ರೀಮತಿ ಸುಶೀಲ ಜೈಕೀರ್ತಿ ಇವರು ಸಹ ನಮ್ಮ ಮಂಡಳಿಯ ಅಧ್ಯಕ್ಷತೆ ಸ್ಥಾನವನ್ನು ವಹಿಸಿಕೊಂಡಿದ್ದರು. ಪ್ರಸ್ತುತ ನಮ್ಮ ಜ್ವಾಲಾಮಾಲಿನಿ ಮಹಿಳಾ ಮಂಡಳಿಯು ಶ್ರೀಮತಿ ಮನೋರಾಧಿನಿ.ಕೆ.ಸಿ. ಧರಣೇಂದ್ರ ಇವರ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ನಮ್ಮ ಮಂಡಳಿಯಲ್ಲಿ 90 ಜನ ಸದಸ್ಯರನ್ನು ಒಳಗೊಂಡಿದೆ.
ನಮ್ಮ ಮಂಡಳಿಯ ವತಿಯಿಂದ ನಡೆಸುವ ಧಾರ್ಮಿಕ ಪರ್ವಗಳ ಆಚರಣೆ:
- ಶ್ರಾವಣ ಭಾನುವಾರ
- ದಶ ಲಕ್ಷಣ
- ಷೋಢಶ ಭಾವನೆ ಪರ್ವ
- ನವರಾತ್ರಿ
- ಲಕ್ಷಾವಳಿ ನೊಂಪಿ
- ಚಂದ್ರನಾಥ ಸ್ವಾಮಿ ಜಯಂತಿ (ಆರಾಧನೆ)
- ಪಾರ್ಶ್ವನಾಥ ಸ್ವಾಮಿ ಮೋಕ್ಷ ಕಲ್ಯಾಣ
- ದೀಪೋತ್ಸವ
- ಮಹಾವೀರ ಜಯಂತಿ.
ನಮ್ಮ ಶ್ರೀ ಜ್ವಾಲಾಮಾಲಿನಿ ಮಹಿಳಾ ಮಂಡಳಿ ವತಿಯಿಂದ 500 ಮತ್ತು ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಇಬ್ಬರು ವಿದ್ಯಾರ್ಥಿಗಳಿಗೆ ತಲಾ 5,000/- ರೂ.ಗಳನ್ನು ನೀಡುತ್ತೇವೆ. ಅಖಿಲ ಕರ್ನಾಟಕ ಮಹಿಳಾ ಒಜಕ್ಕೂಟ ವತಿಯಿಂದ ನಡೆಸಿದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ನಮ್ಮ ಮಂಡಳಿಯ ಪಾತ್ರ ಶ್ಲಾಘನೀಯ. ಬಸದಿಯ ಸ್ವಚ್ಛತಾ ಕಾರ್ಯ ಮತ್ತು ಇತರ ಬಸದಿಯ ಕಾರ್ಯಕ್ರಮದಲ್ಲಿ ಪಾಲುಗೊಳ್ಳುವಿಕೆ ಸ್ವಯಂ ಸೇವಕರಾಗಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿಕೆ. ಮೂಡಬಿದ್ರೆಯಲ್ಲಿ ನಡೆಸಿದ ಸಿದ್ಧಚಕ್ರ ಆರಾಧನೆಯಲ್ಲಿ ಭಾಗವಹಿಸುವಿಕೆ ಮತ್ತು ಅಖಿಲ ಕರ್ನಾಟಕ ಮಹಿಳಾ ಒಕ್ಕೂಟದ ವತಿಯಿಂದ ಶ್ರವಣಬೆಳಗೊಳದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಿ ಭಾಗವಹಿಸುವಿಕೆ, ಖಾದ್ಯಗಳ ಅಂಗಡಿಗಳನ್ನು ಹಾಕಿರುತ್ತೇವೆ. ಅಂದಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ನೃತ್ಯ ಪ್ರದರ್ಶನ ಇನ್ನು ಹಲವಾರು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ ಮತ್ತು ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕದಲ್ಲಿ ಇಕ್ಷು ರಸ ಅಭಿಷೇಕದ ಹರಾಜು ತೆಗೆದುಕೊಂಡಿರುತ್ತೇವೆ ಮತ್ತು ಕನಕಗಿರಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುದ್ದೇವೆ. ಈ ಹಿಂದೆ ನಡೆದ ವೇಣೂರು, ಕಾರ್ಕಳ ಮತ್ತು ಧರ್ಮಸ್ಥಳ ಮಹಾಮಸ್ತಕಾಭಿಷೇಕದಲ್ಲಿ ದ್ರವ್ಯಗಳನ್ನು ಹರಾಜಿನಲ್ಲಿ ಪಡೆದು ಅಭಿಷೇಕ ನಡೆಸಿದ್ದೇವೆ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಸ್ವಯಂ ಸೇವಕರಾಗಿ ಭಾಗವಹಿಸಿದ್ದೇವೆ. ಪ್ರಸ್ತುತ ಹಂತೂರಿನಲ್ಲಿ ನಡೆದ ಪಂಚಕಲ್ಯಾಣದಲ್ಲಿ ನಮ್ಮ ಮಂಡಳಿ ವತಿಯಿಂದ ನೃತ್ಯ ರೂಪಕ ಪ್ರದರ್ಶನ ಮತ್ತು ಅಭಿಷೇಕ ಪಾಲ್ಗೊಳ್ಳುವಿಕೆ, ಹೀಎ ನಮ್ಮ ಮಂಡಳಿಯು ಸಾಮಾಜಿಕ ಕಾರ್ಯಕ್ರಮಗಳಲ್ಲಿ ನಿರತವಾಗಿದೆ.
ಅಧ್ಯಕ್ಷರು : ಮನೋರಾಧಿನಿ ಧರಣೇಂದ್ರ
ಕಾರ್ಯದರ್ಶಿ : ಕಲ್ಪನ ಅಜಿತ
ಖಜಾಂಚಿ : ಗೀತಾ ಧರ್ಮವೀರ
ಜ್ವಾಲಾಮಾಲಿನಿ ಮಹಿಳಾ ಸಮಾಜ ಕಳಸ ಮೂಡಿಗೆರೆ 9449651587
Sl No. | ID No. | Name | Designation | Contact Number | Photo |
---|