Members
ಧಾರಿಣಿ ಮಹಿಳಾ ಮಂಡಲ, ಬಸವನಗಲ್ಲಿ ಬೆಳಗಾವಿ
ನಮ್ಮ ಧಾರಿಣಿ ಮಹಿಳಾ ಮಂಡಲವು 2017 ರಲ್ಲಿ ಸ್ಥಾಪನೆ ಆಯ್ತು. ಇದರ ಅಧ್ಯಕ್ಷರು ಶ್ರೀಮತಿ ಜಿನವಾಣಿ, ಉಪಾಧ್ಯಕ್ಷೆ ಹಾಗೂ ಕಾರ್ಯದರ್ಶಿ ಶ್ರೀಮತಿ ಮಾಣಿಕ ಕಲ್ಮಣಿ ಆಗಿದ್ದರು. ಈಗ ನಮ್ಮ ಮಂಡಳಕ್ಕೆ ಎಂಟು ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ನಾವು ನಮ್ಮ ವಾರ್ಷಿಕ ದಿನದಂದು ಮಂಡಲದ ಮತ್ತು ಸುತ್ತಮುತ್ತಲಿನ ಎಲ್ಲಾ ಮಹಿಳಾ ಮಂಡಳದ ಸದಸ್ಯರಿಗೆ ಸಾಂಸ್ಕೃತಿಕ ಮತ್ತು ವಿವಿಧ ರೀತಿಯ ಸ್ಪರ್ಧೆಗಳನ್ನು ಇಡುತ್ತೇವೆ. ಮಕ್ಕಳಿಗೂ ಸಹ ಸ್ಪರ್ಧೆಗಳನ್ನು ಇಟ್ಟು ಆಕರ್ಷಕ ಬಹುಮಾನಗಳನ್ನು ಕೊಡುತ್ತೇವೆ.
ಬಡ ಕುಟುಂಬದ ಮಹಿಳೆಯರಿಗೆ ಸ್ವಾವಲಂಬನೆಗಾಗಿ ಹೊಲಿಗೆ ಯಂತ್ರ, ಅಂಗವಿಕಲರಿಗೆ ಆರ್ಥಿಕ ಸಹಾಯ, ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕಗಳು (25,000 ರೂ) ಕೆಲವೊಂದು ವಿಶೇಷ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನ, ಅನಾಥಾಶ್ರಮಗಳಿಗೆ ಊಟದ ಮತ್ತು ಅವರ ನಿಯಮಿತ ಬಳಕೆಯ ವಸ್ತುಗಳನ್ನು ಕೊಡುತ್ತಾ ಬಂದಿದ್ದೇವೆ. ಈ ರೀತಿ ನಮ್ಮ ಮಂಡಳದ ವತಿಯಿಂದ ಸಾಮಾಜಿಕ ಸೇವೆಯನ್ನು ಮಾಡುತ್ತಾ ಬಂದಿದ್ದೇವೆ. ನಮ್ಮ ಮಂಡಲದ ಪದಾಧಿಕಾರಿಯಾದ ಶ್ರೀಮತಿ ಮಾಣಿಕ ಕಲ್ಮಣಿ ಇವರು 2018ರ ಅಖಿಲ ಕರ್ನಾಟಕ ಮಹಿಳಾ ಒಕ್ಕೂಟದ ಬೆಳಗಾವಿಯ ಪ್ರತಿನಿಧಿಯಾಗಿದ್ದಾರೆ (ಪದಾಧಿಕಾರಿ).
ಪ್ರತಿ ವರ್ಷ ನಮ್ಮ ಮಂಡಲದ ಹಿರಿಯ ನಾಗರೀಕರೊಬ್ಬರಿಗೆ ಸನ್ಮಾನ ಮಾಡುತ್ತೇವೆ. 2025 ಸೀಸನ್ 5 ದಿನ ಜಿನಭಜನಾ ಸ್ಪರ್ಧೆಯು ಮೈಸೂರಿನಲ್ಲಿ ಏರ್ಪಡಿಸಲಾಗಿತ್ತು. ಆ ಸ್ಪರ್ಧೆಯಲ್ಲಿ ಧಾರವಾಡ ವಲಯದಿಂದ ನಮ್ಮ ಧಾರಿಣಿ ಮಹಿಳಾ ಮಂಡಳಿಯು ಭಾಗವಹಿಸಿತ್ತು.
ಧಾರಿಣಿ ಮಹಿಳಾ ಮಂಡಲ ಬಸವನಗಲ್ಲಿ ಬೆಳಗಾವಿ - 8884320977
| Sl No. | ID No. | Name | Designation | Contact Number | Photo |
|---|---|---|---|---|---|
| 1 | AKJMO-0216 | ಪದ್ಮಾ ಎ ಪಾಟೀಲ್ | ಸದಸ್ಯರು | 78291 59195 |