Members
ಪಂಚಾಕ್ಷರಿ ಮಹಿಳಾ ಸಮಾಜ, ವೈನಾಡು ಕೇರಳ
ದಿನಾಂಕ: 03-05-1995ರಲ್ಲಿ ಶ್ರೀಮತಿ ವನಮಾಲ ಸನತ್ ಕುಮಾರ್ರವರ ಅಧ್ಯಕ್ಷತೆಯಲ್ಲಿ ಮಹಿಳಾ ಸಮಾಜವು ಪುಟ್ಟ ಕಂದಮ್ಮನಂತೆ ಸ್ಥಾಪನೆಗೊಂಡಿತು. ಇದರ ಕಾಲಾವಧಿಯಲ್ಲಿ ಸಮಾಜದ ಆರ್ಥಿಕ ಸುಧಾರಣೆಗಾಗಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಿಬಿರಗಳ ಶಿಬಿರಗಳ ಅನ್ನದಾನದ ಜಾತ್ರೆಗಳು ಮಹಿಳೆಯರಿಗೆ ಹೊಲಿಗೆ ಯಂತ್ರ ದಾನ, ಅಷ್ಟಾಹ್ನಿಕ ಪರ್ವಗಳು ನಡೆಸಿದರು.
ಇವರ ನಂತರ 2005ರಲ್ಲಿ ಉಷಾ ಬಾಹುಬಲಿ ಅವರ ಅಧ್ಯಕ್ಷತೆಯಲ್ಲಿ ಶ್ರೀಗಳನ್ನು ಆಹ್ವಾನಿಸಿ ಸಾಮೂಹಿಕ ವ್ರತೋಪದೇಶ, ಆರಾಧನೆಗಳು, ಅಷ್ಟಾಹ್ನಿಕ, ದಶಲಕ್ಷಣ ಪರ್ವಗಳು, ಧಾರ್ಮಿಕ ಶಿಬಿರ, ತೀರ್ಥಯಾತ್ರೆ, ಅರಿಹಂತಗಿಇರನಾಥ ದರ್ಶನ, ವೈನಾಡಿಗೆ ಬರುವ ಮಠಾಧಿಪತಿಗಳಿಗೆ ಆಹಾರದ ವ್ಯವಸ್ಥೆಯನ್ನು ಮಾಡುತ್ತಿದ್ದರು. ಚಂದ್ರಗಿರಿ ವಾರ್ಷಿಕ ಪೂಜೆಗಳಿಗೆ ಅನ್ನದಾನ ಶಿಬಿರಗಳಿಗೆ ಪ್ರೋತ್ಸಾಹಿಸಿದರು.
2011ರಲ್ಲಿ ಜಯಮ್ಮ ಜಯಣ್ಣನವರಿಗೆ ಅಧ್ಯಕ್ಷ ಸ್ಥಾನ ವಹಿಸಿದರು. ಇವರು ಮಹಿಳಾ ರಕ್ಷಣೆ ಬಗ್ಗೆ ಕಾಳಜಿವಹಿಸಿದರು. ವ್ಯಕ್ತಿ ವಿಕಸನ ಶಿಬಿರಗಳನ್ನು ತೀರ್ಥಯಾತ್ರೆ ಹೊಂಬುಜ, ಶ್ರವಣಬೆಳಗೊಳ ಧಾರ್ಮಿಕ ಶಿಬಿರಗಳು ಆರಾಧನೆಗಳು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ನಿರ್ದೇಶಕರ ಸಭೆಗಳನ್ನು ವೈನಾಡಿನಲ್ಲಿ ಏರ್ಪಡಿಸಿದರು. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದಲ್ಲಿ ೯೩ ಸಮಾಜಗಳಲ್ಲಿ ಮೂರನೇ ಸ್ಥಾನ ಪಡೆಯಲಾಗಿತ್ತು.
2015ರಲ್ಲಿ ಶ್ರೀಮತಿ ಜಯಶ್ರೀ ಶೀತಲನಾಥರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿತು. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾಗಿದ್ದ ಶೀಲಾ ಅನಂತರಾಜುರವರಿಗೆ ಕಾರ್ಯದರ್ಶಿಗಳಾಗಿದ್ದ ಲತಾ ಸುದರ್ಶನ್ರವರಿಗೆ ಸನ್ಮಾನಿಸಲಾಗಿತ್ತು. ಇವರ ಕಾಲಾವಧಿಯಲ್ಲಿ 2018ರಲ್ಲಿ ಸಮಾಜದ ನೋಂದಣಿ ಮಾಡಿಸಲಾಯಿತು.
2022ರಲ್ಲಿ ರಜತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿ ಶ್ರೀಮತಿ ಸುರೇಖಾ ಬಾಬುರವರಿಗೆ ಅಧ್ಯಕ್ಷತೆಯನ್ನು ಹಸ್ತಾಂತರಿಸಲಾಯಿತು. ಮಕ್ಕಳಿಗೂ ಶ್ರಾವಕರಿಗೂ ಒಂದು ದಿನದಲ್ಲಿ 9 ಬಸದಿಗಳ ದರ್ಶನ, ಧಾರ್ಮಿಕ ಶಿಬಿರಗಳಿಗೆ ಪ್ರೋತ್ಸಾಹ, ಪರ್ವಗಳ ಆಚರಣೆ, ವಾರ್ಷಿಕ ಪೂಜೆಗಳಲ್ಲಿ ಅಭಿಷೇಕ, ವ್ಯಕ್ತಿ ವಿಕಸನ ಕ್ಲಾಸ್, 40,000/- ರೂ. ವಿದ್ಯಾರ್ಥಿವೇತನ, ಮಹಾವೀರ ಸ್ವಾಮಿ ನಿರ್ವಾಣ ಮಹೋತ್ಸವಕ್ಕೆ ಪ್ರೋತ್ಸಾಹ, ಆರೋಗ್ಯ, ಮದುವೆ, ಧನಸಹಾಯ, ಮುನಿಕಗಳಿಗೆ ಮಾತಾಜಿಗಳಿಗೆ ಆಹಾರದಾನ, ಮಕ್ಕಳಿಗೂ-ಹಿರಿಯರಿಗೂ ಮಠಾಧಿಪತಿಗಳ ನೇತೃತ್ವದಲ್ಲಿ ವ್ರತೋಪದೇಶ ಹೀಗೆ ಹತ್ತು ಹಲವು ಚಟುವಟಿಕೆಗಳಲ್ಲಿಯೂ ಕಾರ್ಯಕ್ರಮಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಮುನ್ನಡೆಸುತ್ತಿದ್ದೇವೆ.
ವೈನಾಡು ಜೈನ ಸಮಾಜದೊಂದಿಗೆ ಮಹಿಳಾ ಸಮಾಜದ ಸಂಯುಕ್ತಾಶ್ರಯದಲ್ಲಿ 4 ಧಾರ್ಮಿಕ ಉಪಾಧ್ಯಾಯರ ಸಹಾಯದಿಂದ ತಿಂಗಳಿಗೆ ಎರಡು ಬಾರಿ ಹಿರಿಯರಿಗೆ ಧಾರ್ಮಿಕ ತರಗತಿಯನ್ನು ನಡೆಸುತ್ತಾ ಬಂದಿದ್ದೇವೆ.
ಧನ್ಯವಾದಗಳು
ಸೆಕ್ರೆಟರಿ
ಸೌರಭ ಎಸ್
ಪಂಚಾಕ್ಷರಿ ಜೈನ ಮಹಿಳಾ ಸಮಾಜ, ವಯನಾಡ್
ಪಂಚಾಕ್ಷರಿ ಮಹಿಳಾ ಸಮಾಜ ವೈನಾಡು ಕೇರಳ – 9497863669
Sl No. | ID No. | Name | Designation | Contact Number | Photo |
---|---|---|---|---|---|
1 | AKJMO-0173 | ಸುಜಾತಾ ಎಂ ಎ | ಸದಸ್ಯರು | 94478 95303 | |
1 | AKJMO-0174 | ಸುರೇಖಾ ಬಾಬು | ಅಧ್ಯಕ್ಷರು | 94978 63669 |