ಪದ್ಮಾಂಬ ಜೈನ ಮಹಿಳಾ ಒಕ್ಕೂಟ ಬಂಟ್ವಾಳ ತಾಲ್ಲೂಕು

ಪದ್ಮಾಂಬ ಜೈನ ಮಹಿಳಾ ಒಕ್ಕೂಟ ದಿನಾಂಕ: 08/01/2010ರಲ್ಲಿ ಸ್ಥಾಪನೆಯಾಯಿತು. ಶ್ರೀಮತಿ ಮಕರಂದಮ್ಮನವರು ಗೌರವಾಧ್ಯಕ್ಷರಾಗಿ, ಅಧ್ಯಕ್ಷರಾಗಿ ವಿಜಯಕುಮಾರಿ ಇಂದ್ರ, ಕಾರ್ಯದರ್ಶಿಯಾಗಿ ಗೀತಾ ಜಿನಚಂದ್ರ ಆಯ್ಕೆಯಾಗಿ ಇಂದಿನವರೆಗೂ ಸೇವೆ ಸಲ್ಲಿಸುತ್ತ ಬಹಳ ಉತ್ತಮವಾಗಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ನಮ್ಮ ತಂಡದಲ್ಲಿ 15 ಮಹಿಳೆಯರು ಇದ್ದಾರೆ. ನಾವು 2016ರಲ್ಲಿ ಶಿವಸಾಗರ ಮಹಾರಾಜರ ಚಾತುರ್ಮಾಸವನ್ನು ಎಲ್ಲರ ಸಹಕಾರದಿಂದ ನೆರವೇರಿಸಿದ್ದೇವೆ. ಊರಿಗೆ ಬಂದ ಎಲ್ಲಾ ತ್ಯಾಗಿಗಳ ಸೇವೆಯನ್ನು ಮಾಡಿದ್ದೇವೆ. ಶ್ರಾವಣ ಮಾಸದಲ್ಲಿ ಜೈನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿದ್ದೇವೆ. ದಕ್ಷಿಣ ಕನ್ನಡದಲ್ಲಿ ಪಂಚ ಕಲ್ಯಾಣದ ಸಂದರ್ಭದಲ್ಲಿ ನಾವೆಲ್ಲರೂ ಒಟ್ಟಾಗಿ ಊ ಬಡಿಸುವ ಕಾರ್ಯಕ್ರಮ ಮಾಡುತ್ತೇವೆ. ವರಮಹಾಲಕ್ಷ್ಮಿ ಹಬ್ಬದಲ್ಲಿ ಹಿರಿಯ ಮಹಿಳೆಯರನ್ನು ಗುರುತಿಸಿ ಗೌರವಿಸುತ್ತೇವೆ. ಇತ್ತೀಚೆಗೆ ನಡೆದ ವೇಣೂರು ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಿದ್ದೇವೆ. ತನು-ಮನ-ಧನದ ಸಹಾಯವನ್ನು ನೀಡಿದ್ದೇವೆ. ಯಾವುದೇ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮವನ್ನು ಎಲ್ಲರೂ ಸಮಾನಮನಸ್ಕರಾಗಿ ಮಾಡುತ್ತೇವೆ. ಯಾವುದೇ ಪ್ರಶಸ್ತಿಗಳ ಬಗ್ಗೆ ನಮಗೆ ಆಸಕ್ತಿಯಿಲ್ಲ. ದೇವರ ಆಶೀರ್ವಾದ ನಮ್ಮ ಮೇಲಿದೆ. 

 

Sl No. ID No. Name Designation Contact Number Photo