Members
ಬೆಂಗಳೂರು ಉತ್ತರ ಜೈನ ಮಹಿಳಾ ಸಮಾಜ, ಬೆಂಗಳೂರು.
ನಮ್ಮ ಸಮಾಜವು 2015ರಲ್ಲಿ ಸ್ಥಾಪನೆಗೊಂಡು ನೋಂದಣಿಯಾಗಿದೆ ಎಂದು ತಿಳಿಸಲು ಸಂತೋಷವಾಗುತ್ತದೆ. ಶ್ರೀಮತಿ ಪದ್ಮಾವತಿ ಮ.ಬಸ್ತಿ, ಶ್ರೀಮತಿ ಸಪ್ನ ಅಭಿನಂದನ್, ಶ್ರೀಮತಿ ರಜನಿ ಅಮಿತ್, ಶ್ರೀಮತಿ ಡಾ.ಸುನೀತಾ ಪ್ರಕಾಶ್, ಶ್ರೀಮತಿ ಪದ್ಮರಾಜ್ ಕುಮಾರ್, ಶ್ರೀಮತಿ ಮದನಕುಮಾರಿ ಅವರು ನಮ್ಮ ಸಮಾಜದ ಸಂಸ್ಥಾಪಕರಾಗಿರುತ್ತಾರೆ. ನಾವು ಪ್ರತಿವರ್ಷ ದಸರಾ ಸಮಯದಲ್ಲಿ ಗೊಂಬೆ ಪ್ರದರ್ಶನ, ದಾಂಡಿಯ ನೃತ್ಯ, ಕೋಲಾಟ ಆಡುವುದು ಇತ್ಯಾದಿ ಮನರಂಜನಾ ಕ್ರೀಡೆಗಳನ್ನು ನಡೆಸುತ್ತೇವೆ. ಭಗವಾನ್ ಮಹಾವೀರ್ ತೀರ್ಥಂಕರರ ಜನ್ಮ ಕಲ್ಯಾಣವನ್ನು ಪ್ರತಿವರ್ಷ ಸಂಭ್ರಮ ಸಡಗರಗಳಿಂದ ಆಚರಿಸುತ್ತಾ ಬಂದಿದ್ದೇವೆ. ಅಂದು ಶ್ರೀಮತಿ ವಿಜಯ ಕುಮಾರಿ ಅವರು ನಡೆಸುವ ವೃದ್ಧಾಶ್ರಮಕ್ಕೆ ಭೇಟಿ ಭೋಜನ ಹಾಗೂ ಸಿಹಿ ಹಂಚಿಕೆಯನ್ನು ಮಾಡುತ್ತಿದ್ದೇವೆ. ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಗುರುತಿಸಿ ಸನ್ಮಾನ ಮಾಡಿದ್ದೇವೆ.
ಶ್ರಾವಣ ಮಾಸದಲ್ಲಿ ಶ್ರೀ ಪದ್ಮಾವತಿ ಅಮ್ಮನವರಿಗೆ ಷೋಢಶೋಪಚಾರ ಪೂಜೆ ಕುಂಕುಮಾರ್ಚನೆಯನ್ನು ಮಾಡಿ ಜಿನ ಭಜನೆಯನ್ನು ನಡೆಸುತ್ತೇವೆ. ನಮ್ಮ ಸಮಾಜದವತಿಯಿಂದ ರಂಗೋಲಿ ಸ್ಪರ್ಧೆ, ನೃತ್ಯ ಸ್ಪರ್ಧೆ, ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ ಮಾಡಿದ್ದೇವೆ. ಈ ಕಾರ್ಯಕ್ರಮಕ್ಕೆ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ಅವರು ಒಮ್ಮೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಚಾತುರ್ಮಾಸದ ವೇಳೆಯಲ್ಲಿ ಆಗಮಿಸುವ ಮುನಿಗಳ ಆಹಾರ ವ್ಯವಸ್ಥೆಗಾಗಿ ದಾನ ನೀಡುವುದು, ಸುಹಾಸ್ತಿ ಜೈನ್ ಮಿಲನ್ರವರ ಸಹಯೋಗದೊಂದಿಗೆ ಗಿಡ ನೆಡುವ ಕಾರ್ಯಕ್ರಮ, ಬಸದಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ ಅವರಿಗೆ ಆರ್ಥಿಕ ನೆರವನ್ನು ನೀಡಿದ್ದೇವೆ.
ಶ್ರೀಮತಿ ಪದ್ಮಾವತಿ ಮ.ಬಸ್ತಿ, ಅಧ್ಯಕ್ಷರು.
9986997666
Sl No. | ID No. | Name | Designation | Contact Number | Photo |
---|