Members
ವಾಗ್ದೇವಿ ಜೈನ ಮಹಿಳಾ ಮಂಡಲ, ಹುಲ್ಲೋಳಿ
2001 ರಿಂದ 2004 ಈ ಅವಧಿಯಲ್ಲಿ ನಮ್ಮ ಗ್ರಾಮದಲ್ಲಿ “ವೀರವಾಣಿ ಮಹಿಳಾ ಮಂಡಳ” ಎಂಬ ಶಿರೋನಾಮೆಯೊಂದಿಗೆ ಮಹಿಳಾ ಮಂಡಳ ಆರಂಭಗೊಂಡಿತು ಸತತ 3 ವರ್ಷಗಳವರೆಗೆ ಶ್ರೀಮತಿ ಗುಣವಂತಿ ಲಕ್ಷ್ಮಣ ಚೌಗಲಾ ಎಂಬುವವರು ಅಧ್ಯಕ್ಷತೆ ವಹಿಸಿಕೊಂಡರು. ನಮ್ಮ ಗ್ರಾಮದಲ್ಲಿ ಅಳ್ಳ ಕುಂಕುಮ ನೋಂಪಿ ಬೆಳಗಿದವರ ಸಂಖ್ಯೆ ಅತೀ ಕಡಿಮೆಯಾಗಿತ್ತು. ಆದ್ದರಿಂದ ನಮ್ಮ ಪಕ್ಕದ ಹಳ್ಳಿಯ ಕು. ಬಾ. ಬ್ರ. ಅವ್ವಕ್ಕಾ ಖೇಮಲಾಪುರೆಯವರು ಹಾಗೂ ಶಾಂತಿನಾಥ ಉಪಾಧ್ಯೆ ಬೆಲ್ಲದ -ಬಾಗೇವಾಡಿಯವರಿಂದ ನೋಂಪಿ ಹೆಸರಿನಲ್ಲಿ ಒಂದಿಷ್ಟು ಹಣ ಸಂಗ್ರಹಿಸಿ ಪದ್ಮಾವತಿ ಮತ್ತು ಜ್ವಾಲಾಮಾಲಿನಿ ಯಕ್ಷಿಣಿಯರನ್ನು ಕೂರಿಸಲು ಗಾಜಿನ ಪೆಟ್ಟಿಗೆಎಗಳನ್ನು ಮಾಡಿಸಿದರು.
2004-2007ರ ಸಮಯಾವಧಿಯಲ್ಲಿ ಶ್ರೀಮತಿ ಪುಷ್ಪಾವತಿ ಭೂಪಾಲ ಚೌಗಲಾ ಎಂಬುವವರು ಮಹಿಳಾ ಮಂಡಳದ ಅಧ್ಯಕ್ಷತೆ ವಹಿಸಿಕೊಂಡರು ಸುಮಾರು ಜನ ಮಹಿಳೆಯರಿಗೆ ಷೋಢಶಕಾರಣ ಮತ್ತು ದಶಲಕ್ಷಣ ನೋಂಪಿ ವ್ರತ ಹಿಡಿಯಲು ಪ್ರೇರಣೆ ನೀಡಿದರು. ಎಲ್ಲರೂ ಸೇರಿ ಮೆರವಣಿಗೆಯಲ್ಲಿ ಭಗವಾನರನ್ನು ಕೂಡಿಸಲು ಸುಂದರವಾದ ಕಟ್ಟಿಗೆ ಪಲ್ಲಕ್ಕಿ ಮತ್ತು ಶೃತ ಪೇಟಿ ಮಾಡಿಸಿದರು. ದಶಲಕ್ಷಣ ಪರ್ವದಲ್ಲಿ ಉಪನ್ಯಾಸಕರಿಂದ ಧರ್ಮ ಪ್ರಭಾವಣೆ ಮಾಡಲಾಯಿತು.
2007-2010ರಲ್ಲಿ ಶ್ರೀಮತಿ ಶೋಭಾ ವಿಜಯ ಚೌಗಲಾ ಇವರ ಅಧ್ಯಕ್ಷತೆಯಲ್ಲಿ ಅಷ್ಟಾನಿಕ ಪರ್ವ ಆಚರಿಸಲು ಮಂದ್ರವನ್ನು ಮಾಡಸಲಾಯಿತು. ಅನೇಕ ಹುಡುಗಿಯರನ್ನು “ಸಮ್ಯಗ್ ಜ್ಞಾನ ಸಂಸ್ಕಾರ ಶಿಬಿರ”ಕ್ಕೆ (ಬಾಹುಬಲಿ ಕ್ಷೇತ್ರ ಕುಂಭೋಜಕ್ಕೆ) ಕಳುಹಿಸಲಾಯಿತು. “ವಿದ್ಯಾಧರ ಪಾಠಶಾಲೆ”ಯನ್ನು ಆರಂಭಿಸಿ ಮಕ್ಕಳಿಗೆ ಜೈನ ಧರ್ಮ ಸಂಸ್ಕಾರದ ಬಗ್ಗೆ ತಿಳಿಸಿಕೊಡಲು ವ್ಯವಸ್ಥೆ ಮಾಡಲಾಯಿತು.
2010-2013ರಲ್ಲಿ ಶ್ರೀಮತಿ ಕಲಾವತಿ ಜಿನ್ನಪ್ಪಾ ಸಪ್ತಸಾಗರ ಇವರ ಅಧ್ಯಕ್ಷತೆಯಲ್ಲಿ ದಾನಿಗಳಿಂದ ಮೂಲ ನಾಯಕರಿಗೆ ಬೆಳ್ಳಿಯ ಭಾಮಂಡಲ ಮತ್ತು ಛತ್ರತ್ರಯ ಮಾಡಿಸಲಾಯಿತು. ದಾನಪೇಟೆಯೊಂದನ್ನು ತಂದು ಮಂದಿರದಲ್ಲಿಡಲಾಯಿತು. ಪಾಠಶಾಲಾ ಮಕ್ಕಳಿಗೆ ಸಮವಸ್ತ್ರ ಬ್ಯಾಗ್ಸ್ ಮತ್ತು ಬ್ಯಾಡ್ಜ್ ವ್ಯವಸ್ಥೆ ಮಾಡಿಸಲಾಯಿತು. ಪ್ರತಿ ರವಿವಾರ ಒಬ್ಬರ ಮನೆಗೆ ಹೋಗಿ “ಜಿನವಾಣಿ” ಪ್ರಚಾರ, ಪ್ರಸಾರ, ನಾಷ್ಟಾ ವ್ಯವಸ್ಥೆ ಪದಮ ಭಯ್ಯಾಜಿಗಳ ನೇತೃತ್ವದಲ್ಲಿ ನಡೆಸಲಾಯಿತು.
2013-2016ರಲ್ಲಿ ಶ್ರೀಮತಿ ಸುಮತಿ ಜಯಪಾಲ ಚೌಗಲಾ ಇವರ ಅಧ್ಯಕ್ಷತೆಯಲ್ಲಿ (ಹಿತ್ತಾಳಿ) ಅಷ್ಟ ಪ್ರಾತಿಹಾರ್ಯ ಮತ್ತು ಅಷ್ಟಮಂಗಲಗಳನ್ನು ಸಂಗ್ರಹಿಸಲಾಯಿತು. ಒಂದು ಸಂಗೋಷ್ಟಿ ನಡೆಸಿ ಜನರಿಗೆ ಧರ್ಮದ ಬಗ್ಗೆ ಒಲವು ಹೆಚ್ಚಿಸಲು ವ್ಯವಸ್ಥೆ ಮಾಡಲಾಯಿತು. ರತ್ನತ್ರಯ ಸ್ವಾಧ್ಯಾಯ ಮಂಡಳ ಸ್ಥಾಪಿಸಿ ಅನೇಕ ಗ್ರಂಥಗಳನ್ನು ಸಂಗ್ರಹಿಸಿ ಗ್ರಂಥ ಸಂರಕ್ಷಣೆಗಾಗಿ ಬೃಹತ್ ಪೆಟ್ಟಿಗೆ ಮಾಡಿಸಲಾಯಿತು.
2019-2024ರಲ್ಲಿ ಶ್ರೀಮತಿ ಜಿನಮತಿ ವಸವಂತ ಬೇಡಕಿಹಾಳ ಎಂಬುವವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಜೈನ ಧರ್ಮ ಸಂಸ್ಕಾರ ಶಿಬಿರ ಏರ್ಪಡಿಸಲಾಯಿತು. “ಸಮ್ಮೇದ ಶಿಖರಜಿ ಬಚಾವೋ ಆಂದೋಲನ”ದಲ್ಲಿ ಸಕ್ರಯವಾಗಿ ಎಲ್ಲರೂ ಪಾಲ್ಗೊಳ್ಳುವಂತೆ ನೋಡಿಕೊಳ್ಳಲಾಯಿತು. ಕಾಮಕುಮಾರ ನಂದಿ ಮುನಿಗಳ ಹತ್ಯೆ ಖಂಡಿಸಿ ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ತಾಲೂಕು ದಂಡಾಧಿಕಾರಿಗಳಿಗೆ “ದಿಗಂಬರ ಮುನಿ ರಕ್ಷಣೆ ಮತ್ತು ಜೈನ ತೀರ್ಥ ಕ್ಷೇತ್ರ ರಕ್ಷಣೆ” ಆಗಬೇಕೆಂಬ ಸಂಕಲ್ಪದೊಂದಿಗೆ ಮನವಿ ಸಲ್ಲಿಸಲಾಯಿತು.
ಈಗ ನೂತನವಾಗಿ ನಿವೃತ್ತ ಶಿಕ್ಷಕಿಯಾಗಿ ಶ್ರೀಮತಿ ವೇಣುತಾಯಿ ಚೌಗಲಾ ಇವರನ್ನು ನಮ್ಮ ಮಹಿಳಾ ಮಂಡಳದ ವಾಗ್ದೇವಿ ಎಂಬ ನೂತನ ನಾಮಕರಣದೊಂದಿಗೆ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ನಮ್ಮ ಗ್ರಾಮದ ಶ್ರೀ 1008 ನೇಮಿನಾಥ ದಿಗಂಬರ ಜಿನ ಮಂದಿರದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುತ್ತಿದ್ದಾರೆಂದು ಹೇಳಲು ಇಚ್ಛಿಸುತ್ತೇವೆ.
ನಮ್ಮ ಗ್ರಾಮದಲ್ಲಿ ಸಮಸ್ತ ಶ್ರಾವಕ/ಶ್ರಾವಿಕೆಯರಿಂದ ಲಕ್ಷಾಂತರ ಹಣ ಸಂಗ್ರಹಿಸಿ ಹಳಿಂಗಳಿ ಗ್ರಾಮದಲ್ಲಿರುವ ಭದ್ರಗಿರಿಗೆ ಆದಿವೀರ ಎಂಬ ಭವ್ಯ ಹಿತ್ತಾಳೆ ಮೂರ್ತಿ ಮಾಡಿಸಿಕೊಟ್ಟಿರುತ್ತೇವೆ. ಬೆಣಿವಾಡ ಜೈನ ರಹಿತ ಗ್ರಾಮದಲ್ಲಿ ನಡೆದ ಪಂಕಲ್ಯಾಣ ಪೂಜೆಗೆ ಸಮಸ್ತರು ಶ್ರಮಿಸಿದ್ದಾರೆ. ಯರನಾಳ ಗ್ರಾಮದಲ್ಲಿ ನಡೆದ ಶಾಂತಿಸಾಗರ ಮಹಾರಾಜರ “ದೀಕ್ಷಾ ಶತಾಬ್ಧಿ ಉತ್ಸವ”ದಲ್ಲಿ ಕೂಡಾ ಅಷ್ಟೇ ಶ್ರದ್ಧಾಭಕ್ತಿಯಿಂದ ಎಲ್ಲರೂ ಪಾಲ್ಗೊಂಡಿದ್ದೇವೆ. ನಮ್ಮ ಗ್ರಾಮದಲ್ಲಿ ನಡೆದ “ಪಂಚ ಪರಮೇಷ್ಠಿ ಆರಾಧನಾ ಮತ್ತು “ನಮೋಕಾರ ಮಂತ್ರ ವಿಧಾನ”ದಲ್ಲೂ ಸರ್ವರೂ ಪಾಲ್ಗೊಂಡು “ನಮ್ಮ ಧರ್ಮ ನಮ್ಮ ಹೆಮ್ಮೆ” ಅಂತ ಖುಷಿ ಖುಷಿಯಿಂದ ಸಂಭ್ರಮ ಪಟ್ಟಿದ್ದೇವೆಂದು ಹೇಳಲು ತುಂಬಾ ಸಂತೋಷವೆನಿಸುತ್ತದೆ.
ಮಂದಿರಕ್ಕೆ ಬಂದ ಅನೇಕತ್ಯಾಗಿ ಮುನಿಗಳ ಸೇವೆ ಮಾಡಲೂ ಎಲ್ಲರೂ ಶ್ರಮಿಸುತ್ತಾರೆ. ಆಗಾಗ ಬೇರೆ ಸಭೆ ಸಮಾರಂಭಗಳನ್ನು ಏರ್ಪಡಿಸಿ ಧರ್ಮ ಜಾಗೃತಿಗಾಗಿ ಶ್ರಮವಹಿಸುತ್ತೇವೆ.
ಈ ವರ್ಷ ತಾಲೂಕಿನ 6 ಗ್ರಾಮಗಳಲ್ಲಿ ಧರ್ಮ ಸಂಸ್ಕಾರ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ತಾಲೂಕಾ ಜೈನ ಅಸೋಸಿಯೇಶನ್ ಹಾಗೂ ಅರಿಹಂತ ಸೌಹಾರ್ದ ಸಹಕಾರಿ ಸಂಘದ ಸಹಯೋಗದಲ್ಲಿ ತಾಲೂಕಾ ಮಟ್ಟದ ಸಮಾರಂಭ ಶ್ರೀ 108 ಶ್ರೀ ಸಂತ ಶಿರೋಮಣಿ ಆಚಾರ್ಯ ಗುರುವರ ಶ್ರೀ ವಿದ್ಯಾಸಾಗರ ಮಹಾರಾಜರಿಗೆ ಹಮ್ಮಿಕೊಂಡ ವಿನಯಾಂಜಲಿ ಕಾರ್ಯಕ್ರಮದಲ್ಲಿ ಗರಿಷ್ಠ ಪ್ರಮಾಣದಲ್ಲಿ ಶ್ರಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲಾಗಿದೆ.
ಈ ರೀತಿಯಾಗಿ ನಮ್ಮ ಮಹಿಳಾ ಮಂಡಳವು ಸಮಾಜಮುಖಿ ಕಾರ್ಯನಿರ್ವಹಿಸುತ್ತಿದ್ದು ಸಾಮಾಜಿಕ ಪರಿವರ್ತನೆಗಾಗಿ ಹಗಲಿರುಳೂ ಕಾರ್ಯಪ್ರವೃತ್ತರಾಗಿದ್ದಾರೆ.
ವಾಗ್ದೇವಿ ಜೈನ ಮಹಿಳಾ ಮಂಡಲ ಹುಲ್ಲೋಳಿ - 9731966957
| Sl No. | ID No. | Name | Designation | Contact Number | Photo |
|---|