Members
ಶಾಂತಿ ಶ್ರೀ ಜೈನ ಮಹಿಳಾ ಸಮಾಜ, ಬೆಳ್ತಂಗಡಿ
ಪ್ರಸ್ತುತ ಕಾಲಘಟ್ಟದಲ್ಲಿ ನಶಿಸಿ ಹೋಗುತ್ತಿರುವ ಜೈನಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆರೆ ಮುಂದುವರೆಸುವ ಆಶಯದಿಂದ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಬೆಳ್ತಂಗಡಿ ವ್ಯಾಪ್ತಿಯ ಸಮಾನಮನಸ್ಕ ಜೈನ ಮಹಿಳೆಯರು ಧರ್ಮ ಜಾಗೃತಿಯನ್ನು ಮೂಡಿಸುವ ಮೂಲ ಉದ್ದೇಶದಿಂದ ದಿನಾಂಕ : 08/09/2022 ರಂದು ಶ್ರೀ ಶಾಂತಿನಾಥ ಬಸದಿಯಲ್ಲಿ ಶಾಂತಿಶ್ರೀ ಜೈನ ಮಹಿಳಾ ಸಮಾಜವನ್ನು ಸಾಂಕೇತಿಕವಾಗಿ ಪ್ರಾರಂಭಿಸಲಾಯಿತು. 10 ಮಂದಿ ಸದಸ್ಯರಿಂದ ಪ್ರಾರಂಬಗೊಂಡ ನಮ್ಮ ಸಂಘಟನೆ ಈಗ 34 ಸದಸ್ಯೆಯರನ್ನು ಒಳಗೊಂಡಿದೆ. ಪ್ರತಿ ತಿಂಗಳಲ್ಲಿ ಸಭೆ ಸೇರಿ ಧರ್ಮ ಚಿಂತನೆಗೆ ಸಮಯವನ್ನು ನಿಗದಿಪಡಿಸಿ, ಜೈನಧರ್ಮದ ಮೂಲತತ್ವಗಳಿಗೆ ಅನುಸಾರವಾಗಿ ಜೈನ ಧರ್ಮದ ಪ್ರಚಾರ, ಪ್ರಸಾರವನ್ನು ಮಾಡಲಾಗುತ್ತಿದೆ.
ಈವರೆಗೆ ಕೈಗೊಂಡ ಕೆಲವು ಕಾರ್ಯಕ್ರಮಗಳ ತಿರುಗುನೋಟ :
ದಿನಾಂಕ: 06/08/2018ರಂದು ಉದ್ಘಾಟನಾ ಸಮಾರಂಭ.
ಕ್ಷೇತ್ರ ದರ್ಶನ ಪುರಾತನ ಬಸದಿಗಳ ದರ್ಶನ, ಚತುರ್ಮುಖ ಬಸದಿ, ಮಂಜೇಶ್ವರ ಉಳ್ಳಾಲಬಸದಿ, ಇತ್ಯಾದಿ ಹಲವು ಕ್ಷೇತ್ರಗಳ ದರ್ಶನ.
ಲಕ್ಷ ನಮೋಕಾರ ಮಂತ್ರ ಪಠಣ.
ಪ್ರತಿವರ್ಷ ಜಿನ ಭಜನಾ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ.
ಮಹಿಳಾ ದಿನಾಚರಣೆ.
ಪ್ರತಿ ಶುಕ್ರವಾರದಂದು ಸಾಯಂಕಾಲ ಬೆಳ್ತಂಗಡಿ ಬಸದಿಯಲ್ಲಿ ಜಿನ ಭಜನೆ ಮಾಡಲಾಗುತ್ತದೆ. ಬಸದಿಯಲ್ಲಿ ನಡೆಯುವ ಪೂಜೆ, ಆರಾಧನೆಗಳಲ್ಲಿ ಭಾಗವಹಿಸುವಿಕೆ.
ಧರ್ಮ ಸಂರಕ್ಷಣಾ ಯಾತ್ರೆಯಲ್ಲಿ ಭಾಗವಹಿಸುವುದು.
ಸಾಂಸ್ಕೃತಿಕ ವೈಭವ ಯಕ್ಷಗಾನ ಶೈಲಿಯಲ್ಲಿ ಕಾವ್ಯವಾಚನ, ಪ್ರವಚನ, ವೈಭವ ಪ್ರಸಂಗ, ಶ್ರೀ ಜಿನ ಶಾಂತಿನಾಥ ಚರಿತೆ.
ನಮ್ಮ ಮುಂದಿನ ಯೋಜನೆಗಳು :
ಆರ್ಥಿಕವಾಗಿ ಹಿಂದುಳಿದ ಜೈನ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ.
ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವ ಉದ್ದೇಶದಿಂದ ಧಾರ್ಮಿಕ ಶಿಬಿರ.
ನಮ್ಮ ಪರಿಸರದ ಅಶಕ್ತ ಕುಟುಂಬದ ಸದಸ್ಯರಿಗೆ ಸಾಮಾಜಿಕ ನ್ಯಾಯ ಒದಗಿಸುವುದು.
ಅಲ್ಪಸಂಖ್ಯಾತ ನಿಗಮದ ಮಾಹಿತಿಗಳನ್ನು ನೀಡುವುದು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೈನ ಪ್ರಾದೇಶಿಕ ಭಾಷೆ ತುಳುವಿಗೆ ಪ್ರಾತಿನಿಧ್ಯ ನೀಡುವುದು.
ಯೋಗ ತರಬೇತಿಯನ್ನು ನಡೆಸುವುದು ಇತ್ಯಾದಿ ಹಲವು ಕಾರ್ಯಕ್ರಮಗಳು.
ಕಾರ್ಯದರ್ಶಿ
ಶ್ರೀಮತಿ ರಾಜಶ್ರೀ ಎಸ್.ಹೆಗಡೆ
ಕಣಿಯೂರುಗುತ್ತು
ಮೊ:990152373
ಅಧ್ಯಕ್ಷರು
ಶ್ರೀಮತಿ ತ್ರಿಶಲಾ ಜೈನ್ ಕೆ. ಎಸ್.
ದಿವ್ಯ ಧ್ವನಿ, ಬೆಳ್ತಂಗಡಿ
ಮೊ:9481755020
| Sl No. | ID No. | Name | Designation | Contact Number | Photo |
|---|