ಶ್ರೀ ಚಕ್ರೇಶ್ವರಿ ಮಹಿಳಾ ಸಮಾಜ, ಗುಬ್ಬಿ

ತುಮಕೂರಿನಿಂದ 20 ಕಿ.ಮೀ. ನಿಟ್ಟೂರಿನಿಂದ 6 ಕಿ.ಮೀ. ಸುಮಾರು ಮಧ್ಯಭಾಗದಲ್ಲಿರುವುದು ಗುಬ್ಬಿ. ಇಲ್ಲಿ ಶ್ರೀ 1008 ಆದಿನಾಥ ದಿಗಂಬರ ಸುಮದರ ಜಿನ ಮಂದಿರವಿದೆ. ಇಲ್ಲಿ ಮೂಲ ಸ್ವಾಮಿ ಆದಿನಾಥ ಚಂದ್ರನಾಥ ಪಾಶ್ವನಾಥ ಜಿನ ಭಗವಂತರಿದ್ದಾರೆ. ಬಲಗಡೆ ಏಕಶಿಲೆಯ ಸುಂದರವಾದ ಬಾಹುಬಲಿ ಸ್ವಾಮಿಯು ವಿರಾಜಮಾನರಾಗಿ ಬಿಳಿ ಅಮೃತಶಿಲೆಯಲ್ಲಿ ಕಂಗೊಳಿಸುತ್ತಾರೆ. ಬಲಗಡೆ ಏಕಶಿಲೆಯ ಸುಂದರವದ ಬಾಹುಬಲಿ ಸ್ವಾಮಿಯು ವಿರಾಜಮಾನರಾಗಿ ಬಿಳಿ ಅಮೃತಶಿಲೆಯಲ್ಲಿ ಕಂಗೊಳಿಸುತ್ತಾರೆ. ಹಾಗೂ ಎಡಭಾಗದಲ್ಲಿ ಶ್ರೀ ಶೀತಲನಾಥ ತೀರ್ಥಂಕರರು ಅದರ ಕೆಳ ಮಹಡಿಯಲ್ಲಿ ಶ್ರೀ ಕ್ಷೇತ್ರ ಪಾಲ ಬ್ರಹ್ಮದೇವರು ನೆಲೆಸಿದ್ದಾರೆ. 

ಶ್ರೀ ಚಕ್ರೇಶ್ವರಿ ಮಹಿಳಾ ಸಮಾಜದ ಕಿರುಪರಿಚಯ : 

ಗೋಪಿಯಲ್ಲಿ ಸುಮಾರು 35 ಜೈನ ಶಾಸಕರ ಮನೆಗಳಿದ್ದು ಮೊದಲಿಗೆ 1989-1990ರಲ್ಲಿ ದಿ|| ಶ್ರೀಮತಿ ಅನಂತಮ್ಮನವರು ಹಾಗೂ ದಿ|| ಶ್ರೀಮತಿ ಸಿಂಧೂಪುರದ ಪದ್ಮಾವತಮ್ಮನವರ ಶ್ರೀ ಚಕ್ರೇಶ್ವರಿ ಮಹಿಳಾ ಸಮಾಜವನ್ನು ಸ್ಥಾಪಿಸಿದರು. ಅವರು ತಮ್ಮ ಅವಧಿಯಲ್ಲಿ ಒಳ್ಳೆಯ ಸಮಾಜದ ಹಾಗೂ ಧಾರ್ಮಿಕ ಪರ್ವಗಳನ್ನು ಮಾಡುತ್ತಾ ಬಂದರು. ನಂತರ 2008-2013 ರ ತನಕ ಶ್ರೀಮತಿ ರೂಪ ನಾಗರಾಜ್‌ರವರು ನಡೆಸುತ್ತಿದ್ದರು. ನಂತರ ಈಗ 20024ರಿಂದ ಶ್ರೀಮತಿ ಎಂ.ಡಿ.ಚಂದನ ಸುಜಿತ್ ಕುಮಾರ್ ನನ್ನ ಅಧ್ಯಕ್ಷತೆಯಲ್ಲಿ ನಡೆಸುತ್ತಿದ್ದೇನೆ. ನಮ್ಮ ಸಂಘವು ರಿಜಿಸ್ಟರ್ ಆಗಿಲ್ಲ. ಈಗ ನನ್ನ ಅಧ್ಯಕ್ಷತೆಯಲ್ಲಿ ರಿಜಿಸ್ಟರ್ ಮಾಡಲು ಪ್ರಯತ್ನಿಸುತ್ತಿದ್ದೇನೆ. 

ನಮ್ಮ ಸಮಾಜದಲ್ಲಿ ಪ್ರತಿ ತಿಂಗಳು ಅಮಾವಾಸ್ಯೆಯಂದು ಬ್ರಹ್ಮದೇವರಿಗೆ ವಿಶೇಷ ಪೂಜೆ ಹಾಗೂ ಪ್ರತಿ ಹುಣ್ಣಿಮೆಯಂದು ಭಕ್ತಾಮರ ದೀಪಾರಾಧನೆ ನಡೆಸುತ್ತೇವೆ. 

ಪ್ರತಿ ವರ್ಷ ಅಷ್ಟಾನಿಕ ದಶಲಕ್ಷಣ ಶ್ರೀ ಅನಂತನೋಂಪಿ, ಕ್ಷಮಾವಳಿ, ಮಹಾವೀರ ಜಯಂತಿ, ಶೃತ ಪಂಚಮಿ, ಅಕ್ಷಯ ತದಿಗೆ, ಆದಿನಾಥ ಜಯಂತಿಯಂತಹ ಪರ್ವಗಳ ಆಚರಣೆಗಳು ನಡೆಯುತ್ತವೆ. ಶ್ರೀ ಅನಂತನೋಂಪಿ ವೃತ್ತಿಕರಿಗೆ ಮಹಿಳಾ ಸಮಾಜದ ವತಿಯಿಂದ ಆಹಾರದ ವ್ಯವಸ್ಥೆ ಇರುತ್ತದೆ. ನವರಾತ್ರಿಯಲ್ಲಿ ಪ್ರತಿದಿನ ಸಂಜೆ ನವರಾತ್ರಿ ಭಜನೆ ಇರುತ್ತದೆ. ಹಾಗೂ ಕಾರ್ತಿಕ ಮಾಸದಲ್ಲಿ ಪ್ರತಿದಿನ ಸಂಜೆ ಭಕ್ತಾರಮರ ದೀಪಾರಾಧನೆ ಮತ್ತು ಭಜನೆ ಇರುತ್ತದೆ. ಹಾಗೂ ಜಿನ ಮಂದಿರದಲ್ಲಿ ಕೆಲವು ಮುನಿಸೂವ್ರತ ತೀರ್ಥಂಕರ ನವಗ್ರಹ ಆರಾಧನೆ, ಭಕ್ತಾಮರ ಆರಾಧನೆಗಳು ಸಹ ಮಾಡುತ್ತಿರುತ್ತೇವೆ.

 

ಶ್ರೀ ಚಕ್ರೇಶ್ವರಿ ಮಹಿಳಾ ಸಮಾಜ ಗುಬ್ಬಿ 9901162388

Sl No. ID No. Name Designation Contact Number Photo