Members
ಶ್ರೀ ಪದ್ಮಾವತಿ ಮಹಿಳಾ ಸಮಾಜ, ಹಳೆ ಹುಬ್ಬಳ್ಳಿ
ಪದ್ಮಾವತಿ ಮಹಿಳಾ ಸಮಾಜ ಸ್ಥಾಪನೆ ಆದ ವರ್ಷ : 15-05-2002 ರಲ್ಲಿ ನೋಂದಣಿಯಾಗಿದೆ.
ಸಮಾಜದ ಸಂಸ್ಥಾಪಕರ ಹೆಸರುಗಳು :
ಅಧ್ಯಕ್ಷರು : ಶ್ರೀಮತಿ ಸುಧಾ ಶಿರಗುಪ್ಪಿ,
ಉಪಾಧ್ಯಕ್ಷರು : ಶ್ರೀಮತಿ ಪದ್ಮಾವತಿ ತಾಳಿಕೋಟೆ,
ಕಾರ್ಯದರ್ಶಿ : ಶ್ರೀಮತಿ ವಸಂತ ಜೈನ ಭಾರತಿ ರಾಜಮಾನೆ,
ಸಹಕಾರ್ಯದರ್ಶಿ : ಶ್ರೀಮತಿ ನಯನ ತಾಳಿಕೋಟೆ, ಜಯಶ್ರೀ ಎರೇಶಿ, ಮಿ. ಸುವರ್ಣ ಡುಮ್ಮಣ್ಣನವರ.
ನಮ್ಮ ಮಹಿಳಾ ಮಂಡಲದ ಧಾರ್ಮಿಕ ಕಾರ್ಯಕ್ರಮಗಳು :
ಅಷ್ಟಾಹ್ನಿಕ ಪರ್ವದಲ್ಲಿ ನಂದೀಶ್ವರ ಪುಂಜದ ಸ್ಪರ್ಧೆ ಹಾಗೂ ಅದರ ಬಗ್ಗೆ ರಸಪ್ರಶ್ನೆಗಳನ್ನು ನಡೆಸುತ್ತೇವೆ. ಶ್ರಾವಣ ಶುಕ್ರವಾರ ಕುಂಕುಮಾರ್ಚನೆ ಮಾಡಿಸುತ್ತೇವೆ.
ಮಹಿಳೆಯರಿಗೆ ಧಾರ್ಮಿಕ ತರಗತಿಯನ್ನು ಪ್ರತಿ ಶನಿವಾರ ನಡೆಸುತ್ತೇವೆ ಮತ್ತು ಭಾನುವಾರಕ್ಕೊಮ್ಮೆ ಒಂದೊಂದು ತೀರ್ಥಂಕರರ ಅಷ್ಟವಿಧಾರ್ಚನೆ ಮಾಡುತ್ತೇವೆ. ನವರಾತ್ರಿಯಲ್ಲಿ ಅಲಂಕಾರ ಕುಂಕುಮ ರಚನೆ ಅಮ್ಮನವರ ವಿಧಾನ, ಉಡಿ ತುಂಬುವ ಕಾರ್ಯಕ್ರಮವನ್ನು ಇಟ್ಟುಕೊಳ್ಳುತ್ತೇವೆ.
ಮಹಾವೀರ ಜಯಂತಿ ಪ್ರಯುಕ್ತ ಧಾರ್ಮಿಕ ರಂಗೋಲಿ ಸ್ಪರ್ಧೆ ಇಟ್ಟಿರುತ್ತೇವೆ. ಮಹಾವೀರ ಜಯಂತಿಯಲ್ಲಿ ಸ್ತಬ್ಧ ಚಿತ್ರವನ್ನು ಮಾಡಿ ಎರಡು ಸಲ ಪ್ರಥಮ ದ್ವಿತೀಯ ಬಹುಮಾನ ಪಡೆದುಕೊಂಡಿರುತ್ತೇವೆ.
ಚಾತುರ್ಮಾಸ, ಓಂಕಾರ ಮಂತ್ರ, ತ್ರಿಕಾಲ ತೀರ್ಥಂಕರ ಹೆಸರು ಬರೆಯಲು ಕೊಟ್ಟಿರುತ್ತೇವೆ ಮತ್ತು ಹೆಣ್ಣುಮಕ್ಕಳಿಗೆ ಅರಳ ಕುಂಕುಮ ನೋಂಪಿ ಮಾಡಿಸಿರುತ್ತೇವೆ ಮತ್ತು ವರ್ಷದಲ್ಲಿ ಎರಡು ಧಾರ್ಮಿಕ ಪ್ರವಾಸಗಳನ್ನು ಇಟ್ಟಿರುತ್ತೇವೆ. ಈ ವರ್ಷ 50 ಜನರಿಗೆ ಸಮ್ಮೇದ ಶಿಖರಜಿ ಯಾತ್ರೆಯನ್ನು ಆಯೋಜಿಸಿದ್ದೆವು.
ಶ್ರಾವಕರ ಅಪೇಕ್ಷೆ ಮೇರೆಗೆ ಅವರ ಮನೆಗೆ ಹೋಗಿ ಭಕ್ತಾಮರ ಪಠಣ, ಪದ್ಮಾವತಿಯ ಕುಂಕುಮಾರ್ಚನೆ, ಮಂಗಳಾರತಿ ಮಾಡಿ ಬರುತ್ತೇವೆ.
ಹುಬ್ಬಳ್ಳಿಗೆ ಯಾರೇ ತ್ಯಾಗಿಗಳು ಬಂದರೂ ಅವರ ಆಹಾರ-ವಿಹಾರ, ವೈಯ್ಯಾವೃತ್ತ ಇತ್ಯಾದಿಗಳಲ್ಲಿ ಮುಂಚೂಣಿಯಲ್ಲಿ ಇರುತ್ತೇವೆ.
ಮಹಿಳಾ ಮಂಡಳದಿಂದ ಜನ ಭಜನೆಯಲ್ಲಿ ಎರಡು ತಂಡ ಭಾಗವಹಿಸಿ ಪ್ರಶಸ್ತಿ ಪಡೆದಿರುತ್ತಾರೆ.
ನಮ್ಮ ಮಂಡಲದ ಸಾಮಾಜಿಕ ಕಾರ್ಯಕ್ರಮಗಳು :
ಅಣ್ಣ ಹಜಾರೆ ಹೋರಾಟದಲ್ಲಿ ಭಾಗವಹಿಸಿದೆವು. ಅಮ್ಮಂದಿರ ದಿನದಂದು ವಿಜಯ ಕರ್ನಾಕ ಪತ್ರಿಕೆಯವರು ನಮ್ಮನ್ನು ಆಹ್ವಾನಿಸಿ ನಮ್ಮ ಕೈಯಿಂದ ಅಡಿಗೆ ಮಾಡಿಸಿ ಅನಾಥ ಮಕ್ಕಳಿಗೆ ಊಟ ಬಡಿಸಿದರು.
ಕಳಸ ಬಂಡೂರಿ ಮಹದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ಪ್ರತಿಭಟನೆ ಮಾಡಿದೆವು ಮತ್ತು ಕನ್ನಡ ಜಾನಪದ ಸಂಸ್ಕೃತಿ, ದೇಶಿ ಕ್ರೀಡೆಗಳು, ರಾಜ್ಯಮಟ್ಟದ ಸಮಾವೇಶದಲ್ಲಿ ಭಾಗವಹಿಸಿ ಎರಡು ಪ್ರಶಸ್ತಿಗಳು ಬಂದಿವೆ.
ಪ್ರತಿ ವರ್ಷ ರಕ್ಷಾಬಂಧನ ದಿನದಂದು ಅಂಧ ಮಕ್ಕಳಿಗೆ, ಅಂಗವಿಕಲರಿಗೆ, ಅನಾಥ ಮಕ್ಕಳಿಗೆ ರಾಖಿ ಕಟ್ಟಿ ಸಹಿ ಹಂಚಿ ಬರುತ್ತೇವೆ.
ಸೈನಿಕ ಕುಟುಂಬದವರಿಗೆ ಸನ್ಮಾನಿಸಿ ಆರ್ಥಿಕ ಸಹಾಯಮಾಡಿ ಬರುತ್ತೇವೆ ಮತ್ತು ಕೊಡಗು ನೆರೆ ಸಂತ್ರಸ್ತರಿಗೆ ರೂ. 50,000/- ಸಹಾಯ ಮಾಡಿರುತ್ತೇವೆ.
ಚಾತುರ್ಮಾಸಕ್ಕೆ ಆರ್ಯಿಕ ವಿಷಯ ಶ್ರೀ ಮಾತಾಜಿಯವರ ಸಂಘಕ್ಕೆ ರೂ. 53,000/- ಆಹಾರದಾನಕ್ಕೆ ಕೊಟ್ಟಿರುತ್ತೇವೆ.
ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಅಂಕ ಪಡೆದವರಿಗೆ ಅಂದರೆ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಇಟ್ಟುಕೊಳ್ಳುತ್ತೇವೆ ಮತ್ತು ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಪೆನ್ನು, ನೋಟ್‌ಬುಕ್‌ಗಳು ವಿತರಣೆ ಮಾಡುತ್ತೇವೆ.
ಕೃತಕ ಕಾಲು ಜೋಡಣೆಗೆ 40 ಕಾಲುಗಳಿಗೆ ಹಣ ಸಂಗ್ರಹಿಸಿ ಕೊಟ್ಟಿರುತ್ತೇವೆ.
ಶ್ರವಣಬೆಳಗೊಳದಲ್ಲಿ ನಡೆದ ಪ್ರಾಕೃತ ಪರೀಕ್ಷೆ ಭಾಗವಹಿಸಿ ಪ್ರಥಮ, ದ್ವಿತೀಯ ಬಹುಮಾನ ಪಡೆದಿರುತ್ತಾರೆ ಮತ್ತು ರಾಜ್ಯಮಟ್ಟದ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಲಭಿಸಿರುತ್ತದೆ.
ಪದ್ಮಾವತಿ ಮಹಿಳಾ ಮಂಡಳದಿಂದ ಸಾಮಾಜಿಕ ಹಾಗೂ ಧಾರ್ಮಿಕವಾಗಿ ಎಲ್ಲಾ ಕಾರ್ಯಕ್ರಮಗಳಿಗೆ ಎಲ್ಲಾ ಸದಸ್ಯರು ಸೇರಿ ಒಗ್ಗಟ್ಟಿನಿಂದ ಮಾಡುತ್ತೇವೆ.
ಸುಧಾ ಶಿರಗುಪ್ಪಿ, ಅಧ್ಯಕ್ಷರು ಫೋ : 9343359276
ವಸಂತ ಜೈನ, ಕಾರ್ಯದರ್ಶಿ, ಫೋ : 9900533537
| Sl No. | ID No. | Name | Designation | Contact Number | Photo |
|---|---|---|---|---|---|
| 1 | AKJMO-0101 | ಸುಧಾ ಶಿರಗುಪಿ | ಅಧ್ಯಕ್ಷರು | 93433 59376 | |
| 1 | AKJMO-0102 | ಪದ್ಮಲರಹ ಎ ಸೂಜಿ | ಸದಸ್ಯರು | 98455 51205 |