Members
ಸತ್ಸಂಗ ಮಹಿಳಾ ಸಮಾಜ, ಕೋಡಿಹಳ್ಳಿ ಬೆಂಗಳೂರು
ಸತ್ಸಂಗ ಮಹಿಳಾ ಸಮಾಜವನ್ನು 25/30 ವರ್ಷಗಳ ಹಿಂದೆ ಧರ್ಮಸ್ಥಳದ ಶ್ರೀಮತಿ ಪದ್ಮಲತಾ ನಿರಂಜನ್ರವರು, ಶ್ರೀಮತಿ ಮಂಜುಳಾ ಅಜಿತ್ ಕುಮಾರ್ ಅವರ ಒಡಗೂಡಿ ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೂ 10 ಸದಸ್ಯರಿಂದ ಪ್ರಾರಂಭವಾಗಿ ಇಂದು 55 ಸದಸ್ಯರನ್ನು ಒಳಗೊಂಡಿದೆ. ಪ್ರಸ್ತುತ ಶ್ರೀಮತಿ ಲಲಿತ ಭಾನುಕುಮಾರ್, ವಿಜಯಲಕ್ಷ್ಮಿ, ಶಶಿಕಲಾ ಹಾಗೂ ಪುಷ್ಪಲತಾರವರ ನೇತೃತ್ವದಲ್ಲಿ ಯಶಸ್ವಿಯಾಗಿ ಸಂಘ ನಡೆಸಲಾಗುತ್ತಿದೆ.
ಪ್ರತಿ ತಿಂಗಳ 2ನೆಯ ವಾರ ಆರಾಧನೆ, ಭಕ್ರಾಮರ ಸ್ತೋತ್ರ ಪಠಣ, ಭಕ್ತಿ ಗೀತೆ, ಧಾರ್ಮಿಕ ಪ್ರವಚನ ಹಾಗೂ ಉಪಾಹಾರ ಅಷ್ಟೂ ಸದಸ್ಯರ ಹಾಜರಾತಿಯೊಂದಿಗೆ ನಡೆಯುತ್ತಿದೆ.
ದಾನ-ಧರ್ಮದ ವಿಷಯ ಬಂದರೆ, ಮಹಾವೀರ ಮಂದಿರಕ್ಕೆ ಒಂದು ಕೊಠಡಿ, 4 ಬೆಳ್ಳಿ ಚಟುಷ್ಕೋಣ ಬಿಂದಿಗೆಗಳು, ಊಟದ ಕೊಠಡಿಗೆ ಪಾತ್ರೆಗಳು, ಫ್ಯಾನ್, ಪಂಚ ಕಲ್ಯಾಣದ ಸಮಯದಲ್ಲಿ ಲಕ್ಷಾಂತರ ರೂ.ಗಳ ಕೊಡುಗೆ ಕೊಡಲಾಗಿದೆ. ಜಿನ ಮಂದಿರಕ್ಕೆ ಬರುವ ಮುನಿಗಳ ಆಹಾರ ಚರ್ಯೆಗೆ ಕೈ ಜೋಡಿಸುತ್ತೇವೆ.
ಸದಸ್ಯರೆಲ್ಲರೂ ಪ್ರವಾಸ ಕೈಗೊಂಡು ಸೋಂದ, ಕನಕಗಿರಿಗೆ ಹಣದಾನ, ಕಂಬದಹಳ್ಳಿಗೆ ರೂ. 1,00,000/- ಹಣ ಹಾಗೂ ಊಟದ ಕೊಠಡಿಗೆ ಫ್ಯಾನ್, ತಟ್ಟೆ, ಗ್ಲಾಸ್, ಸೋಂದಾ ವಿದ್ಯಾರ್ಥಿಗಳಿಗೆ ಊಟದ ತಟ್ಟೆ-ಗ್ಲಾಸ್ಗಳು, ಶ್ರವಣಬೆಳಗೊಳದ ಜಕಳಮ್ಮಮ ಮಂದಿರಕ್ಕೆ ಸೋಲಾರ್ ದೀಪದ ವ್ಯವಸ್ಥೆ, ಅರಿಹಂತಗಿರಿಗೆ 1 ಲಕ್ಷ ರೂಪಾಯಿ ದಾನ ಮಾಡಿದ್ದೇವೆ. ತುಮಕೂರಿನ ಶಾಂತ ಸನ್ಮತಿಕುಮಾರ್ ನಿರ್ಮಿಸಿದ ಶಾಲೆಗೆ 50 ಸಾವಿರ ರೂ. ಕೊಡಲಾಗಿದೆ. ಯಾರೇ ಬಂದು ದಾನ ಕೇಳಿದಾಗ ಇಲ್ಲ ಎನ್ನದೆ ಕೈಲಾದಷ್ಟು ಸಹಾಯ ನಮ್ಮ ಸಂಘ ಮಾಡುತ್ತಿದೆ. ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಗಳನ್ನು ಮಾಡಿದ್ದೇವೆ.
ನಮ್ಮದು 55 ಸದಸ್ಯರ ಒಂದು ಚಿಕ್ಕ ಸಂಘ, ಎಲೆಮರೆಯ ಕಾಯಿಯಂತೆ ಇದ್ದು, ಧಾರ್ಮಿಕವಾಗಿ ಧನಸಹಾಯ ಮಾಡುತ್ತ, ಭಜನೆ ಮಾಡುತ್ತ ಸಂಘವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇವೆ.
ಸಂಪರ್ಕ ಸಂಖ್ಯೆ : 9886027680
Sl No. | ID No. | Name | Designation | Contact Number | Photo |
---|