"ಸಕ್ಕರೆ ನಗರ"ಮಂಡ್ಯದಲ್ಲಿ,ದಿನಾಂಕ 21-12-2025 ರಂದು ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ತೃತೀಯ ಸಭೆ
"ಸಕ್ಕರೆ ನಗರ"ಮಂಡ್ಯದಲ್ಲಿ,ದಿನಾಂಕ 21-12-2025 ರಂದು ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ತೃತೀಯ ಸಭೆ
ಸರ್ವರಿಗೂ ಜೈಜಿನೇಂದ್ರ 🌺🙏
ಶುಭದಿನ 💐
"ಒಗ್ಗಟ್ಟಿನಲ್ಲಿ ಬಲವಿದೆ" ಎನ್ನುವ ಮಂತ್ರಕ್ಕೆ ಸಾಕ್ಷಿಯಾಯಿತು, "ಸಕ್ಕರೆ ನಗರ"ಮಂಡ್ಯದಲ್ಲಿ,ದಿನಾಂಕ 21-12-2025 ರಂದು ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ತೃತೀಯ ಸಭೆ💐🙏
ಪರಿಸರ ಸಂರಕ್ಷಣೆ, ಅರೋಗ್ಯ,ಸಾಂಸ್ಕೃತಿಕ,ಅಲ್ಪಸಂಖ್ಯಾತ ಆಯೋಗದ ಬಗ್ಗೆ ಮಾಹಿತಿ, ಸ್ವಚ್ಛ ಭಾರತ್ ಆಂದೋಲನದ ಬಗ್ಗೆ ಮಾಹಿತಿ,ಮಹಿಳಾ ಸಾಹಿತ್ಯದ ಬಗ್ಗೆ ಮಾಹಿತಿ ಹೀಗೆ ಹತ್ತು ಹಲವಾರು ವಿಶೇಷ ವಿಷಯಗಳ ಬಗ್ಗೆ ಅರಿವು ಮೂಡಿಸಿತು ಈ ಅದ್ಭುತ ಕಾರ್ಯಕ್ರಮ👍
ಪ್ರಥಮವಾಗಿ ಮಾವಿನ ಸಸಿಗೆ ನೀರೆರೆಯುವುದರ
ಮೂಲಕ ಪ್ರಾರಂಭ ವಾಯಿತು.pulse Polio ಅಭಿಯಾನದಲ್ಲಿ ಪಾಲ್ಗೊಳ್ಳಲಾಯಿತು. ಒಕ್ಕೂಟದ ನಿರ್ದೇಶಕರ ಸಭೆ, ಹಲವು ನಿರ್ದೇಶಕರು ತಮ್ಮ ಅನಿಸಿಕೆಗಳನ್ನು ಹಾಗೂ ಮಹಿಳಾ ಸಮಾಜದವರು ತಮ್ಮ ಸಮಾಜಗಳ ವರದಿಯನ್ನು ಪ್ರಸ್ತುತ ಪಡಿಸಿದರು ಒಕ್ಕೂಟದ ಉಪಾಧ್ಯಕ್ಷರಾದ ಶ್ರೀಮತಿ ಡಾ. ನೀರಜಾ ನಾಗೇಂದ್ರ ಕುಮಾರ್ ಅವರು ಎಲ್ಲರಿಗೂ ಒಳ್ಳೆಯ ಸಂದೇಶವನ್ನು ನೀಡಿದರು.ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪದ್ಮಾ ಪ್ರಕಾಶ್ ಅವರು ಒಕ್ಕೂಟದ ಕಾರ್ಯಕ್ರಮಗಳ ಬಗ್ಗೆ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ತಿಳಿಸಿದರು. ಮಂಡ್ಯದ ಶ್ರೀ ಜ್ವಾಲಾಮಲಿನಿ ಮಹಿಳಾ ಸಮಾಜದ ಶ್ರೀಮತಿ ಸೌಖ್ಯ, ಶ್ರೀಮತಿ ರೂಪಾ ಅವರಿಂದ ಪ್ರಾರ್ಥನೆ, ಹಾಗೂ ಒಕ್ಕೂಟದ ಮಂಗಳಾಚಾರಣೆ ಅತ್ಯಂತ ಸುಂದರವಾಗಿ, ಸುಶ್ರಾವ್ಯವಾಗಿ ಮೂಡಿಬಂದಿತು.ಶ್ರೀಮತಿ ದೀಪ ಅವರು ಸ್ವಾಗತಿಸಿದರು. ಶ್ರೀಮತಿ ಹರ್ಷ ನಾಗರಾಜ್ ಅವರು ಪ್ರಾಸ್ಥಾವಿಕ ನುಡಿಗಳನ್ನಾಡಿ, ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.
ನಂತರದಲ್ಲಿ ಶ್ರೀ ಜ್ವಾಲಾಮಾಲಿನಿ ಮಹಿಳಾ ಸಮಾಜದ ಮುಖ್ಯ ಕಾರ್ಯಕ್ರಮ ಸುಂದರವಾದ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಒಕ್ಕೂಟದ ಮಂಗಳಾಚಾರಣೆಯನ್ನು ಮಹಿಳಾ ಸಮಾಜದವರು ಸುಶ್ರಾವ್ಯವಾಗಿ, ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ,ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯ ಜಿಲ್ಲಾಧಿಕಾರಿ ಶ್ರೀಮತಿ ಮಧುಶ್ರೀ, ಜನರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಶ್ರೀಮತಿ ಯಶೋದಾ ಜೈನ್ ಅವರು ಅಲ್ಪಸಂಖ್ಯಾತರಾದ ನಾವು,ಸರ್ಕಾರದಿಂದ ದೊರೆಯುವ,ಸೌಲಭ್ಯಗಳನ್ನು ತೆಗೆದುಕೊಳ್ಳಬೇಕೆಂದು ಕರೆ ನೀಡಿದರು. ಸಾಹಿತಿಗಳಾದ ಶ್ರೀಮತಿ ಪ್ರೀತಿ ಶುಭಚಂದ್ರ ಅವರು ಜೈನ ಸಾಹಿತ್ಯಕ್ಕೆ, ಜೈನ ಮಹಿಳೆಯರ ಕೊಡುಗೆಯ ಬಗ್ಗೆ ಉಪನ್ಯಾಸ ನೀಡಿದರು, ಶ್ರೀಮತಿ ಜ್ವಾಲ ಸುರೇಶ್ ಅವರು ಪ್ರಾಕೃತವನ್ನು ಉಳಿಸಿ, ಬೆಳೆಸುವುದರ ಬಗ್ಗೆ ತಿಳಿಸಿದರು.ಶ್ರೀಮತಿ ಪದ್ಮಾ ಪ್ರಕಾಶ್ ಅವರು ಮಹಿಳಾ ಸಮಾಜಗಳು ಉತ್ತಮರೀತಿಯಲ್ಲಿ ಕಾರ್ಯಗಳನ್ನು ನಿರ್ವಹಿಸುವುದರ ಜೊತೆಗೆ ಸಾಮಾಜಿಕ ಅಭಿವೃದ್ಧಿಯಲ್ಲೂ ಸಹ ಕ್ರಿಯಾಶೀಲರಾಗಿರಬೇಕೆಂದು ಕರೆ ನೀಡಿದರು. ಶ್ರೀಮತಿ ಕುಸುಮ ಶಯನ್ ಸ್ವಾಗತಿಸಿದರು. ಶ್ರೀಮತಿ ರತ್ನ & ಶ್ರೀಮತಿ ಫಣಿಮಾಲ ಸುಂದರವಾಗಿ, ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಪೂರ್ಣಿಮಾ ಗೊಮ್ಮಟೇಶ್ ವಂದಿಸಿದರು.
"ಕಸದಿಂದ ರಸ" ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದಿಂದ ಬಹುಮಾನಗಳನ್ನು ನೀಡಲಾಯಿತು. ಭಾಗವಹಿಸಿ ದವರೆಲ್ಲರಿಗೂ ಪ್ರೋತ್ಸಾಹವನ್ನುಮಹಿಳಾ ಸಮಾಜದಿಂದ ನೀಡಲಾಯಿತು.
ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಶುಚಿ ರುಚಿಯಾದ ಆಹಾರದ ವ್ಯವಸ್ಥೆ, ಸಭಾಂಗಣದ ಸುಂದರ ಅಲಂಕಾರ.. ಮಹಿಳಾ ಸಮಾಜ ಹಾಗೂ ಮಂಡ್ಯ ನಗರ ಜೈನ ಸಮಾಜದವರ ಅಭಿರುಚಿಯನ್ನು ಸಾರಿ ಸಾರಿ ಹೇಳಿದವು.
ಮಂಡ್ಯದ ಶ್ರೀ ಅನಂತನಾಥ ಜೈನ ಸಮಾಜ, ಶ್ರೀ ಜ್ವಾಲಾಮಾಲಿನಿ ಮಹಿಳಾ ಸಮಾಜ, ಯುವಮಂಡಳಿ ಇವರೆಲ್ಲರಿಗೂ ನಮ್ಮ ಒಕ್ಕೂಟದ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು & ಸಪ್ರೇಮ ಜೈಜಿನೇಂದ್ರಗಳು 🙏🙏🙏
ಶ್ರೀ ಜ್ವಾಲಮಾಲಿನಿ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ ಗೊಮ್ಮಟೇಶ್, ಕಾರ್ಯದರ್ಶಿ ಶ್ರೀಮತಿ ಕುಸುಮ ಶಯನ್, ಎಲ್ಲಾ ಪದಾಧಿಕಾರಿಗಳು, ಸದಸ್ಯೆಯರು
ಮಂಡ್ಯ ನಿರ್ದೇಶಕರಾದ ಶ್ರೀಮತಿ ಪದ್ಮಶ್ರೀ ಶಾಂತಿಪ್ರಸಾದ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು & ಸಪ್ರೇಮ ಜೈಜಿನೇಂದ್ರಗಳು 🙏🙏🙏
ಈ ಅಭೂತಪೂರ್ವವಾದ, ಚಿರಸ್ಮರಣೀಯವಾದ, ಸುಂದರ ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣವಾದ ಸರ್ವರಿಗೂ ಅನಂತಾನಂತ ಜೈಜಿನೇಂದ್ರಗಳು 🙏🙏🙏