ಗುರುಪೂರ್ಣಿಮೆ ದಿನದ ಆಚರಣೆ
ಗುರುಪೂರ್ಣಿಮೆ ದಿನದ ಆಚರಣೆ
ದಿನಾಂಕ 10.07.2025 ನೇ ಗುರುವಾರ ಗುರು ಪೂರ್ಣಿಮೆಯ ಪ್ರಯುಕ್ತ ಜೈನ ಕಾಶಿ ಮೂಡಬಿದ್ರೆಯ ಶಾಂತಿ ಭವನದಲ್ಲಿ ಪ. ಪೂ.ಆಚಾರ್ಯ 108 ಗುಲಾಬ್ ಭೂಷಣ್ ಮುನಿ ಮಹಾರಾಜರ ದಿವ್ಯ ಉಪಸ್ಥಿತಿಯಲ್ಲಿ ಪ. ಪೂ.ಸ್ವಾಮೀಜಿಯವರ ದಿವ್ಯ ನೇತೃತ್ವದಲ್ಲಿ, ಲಘು ಸಿದ್ಧ ಚಕ್ರ ಯಂತ್ರ ಆರಾಧನೆ ನಡೆಸಲಾಯಿತು. ಬಳಿಕ ಗುರು ವಂದನಾ ಕಾರ್ಯಕ್ರಮ ಮತ್ತು ಪ್ರವಚನ ಕಾರ್ಯಕ್ರಮ ನಡೆಸಲಾಯಿತು. ಸರ್ವಮಂಗಳ ಜೈನ ಮಹಿಳಾ ಸಂಘದ ಸದಸ್ಯರು ಹಾಗೂ ಊರ ಪರವೂರ ಧರ್ಮ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು