ದಾವಣಗೆರೆ ಯ ಪದ್ಮಾಂಬ ಮಹಿಳಾ ಸಮಾಜ ವತಿಯಿಂದ ಕಲ್ಪದ್ರುಮ ಆದಿನಾಥ ಜಿನಮಂದಿರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಇಂದು ದಾವಣಗೆರೆ ಯ ಪದ್ಮಾಂಬ ಮಹಿಳಾ ಸಮಾಜ ವತಿಯಿಂದ ಕಲ್ಪದ್ರುಮ ಆದಿನಾಥ ಜಿನಮಂದಿರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಏರ್ಪಡಿಸಲಾಗಿತ್ತು ಅತ್ಯಂತ ಸುಂದರ,ಸರಳ, ಚಿರಸ್ಮರಣೀಯ ಸಮಾರಂಭವಾಗಿತ್ತು ನಮ್ಮ ಮಹಿಳಾ ಸಮಾಜದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ.🥰🙏 ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಮುಖ್ಯಪಾಧ್ಯಾಯಿನಿ ಶ್ರೀಮತಿ ಗಿರಿಜಾ ಅವರು ಅತ್ಯುತ್ತಮ ವಾಗ್ಮಿ.ಮಹಿಳಾ ದಿನಾಚರಣೆ,ಜೈನ ಧರ್ಮ ಹಾಗೂ ಜೈನ ಕವಿಗಳು, ಇಂದಿನ ದಿನಗಳಲ್ಲಿ ಮಹಿಳೆಯರ ಪಾತ್ರ,ಪ್ರತಿರಂಗಗಳಲ್ಲಿನ ಆದರ್ಶ ಮಹಿಳೆಯರು ಹಾಗೂ ಅವರ ಪ್ರಾಮುಖ್ಯತೆಯನ್ನು ಅದ್ಭುತವಾಗಿ ತಿಳಿಸಿದರು.🙏ತಮ್ಮ ಜೀವನದ ಹಲವು ಅನುಭವಗಳ ಮೂಲಕ, ದೃಷ್ಟಾಂತಗಳ ಮೂಲಕ ವಿಷಯಗಳನ್ನು ಮನದಟ್ಟು ಮಾಡಿದರು👍. ಹಾಗೂ ಭಾಷಣದ ನಡುವೆ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದರು. ಕೆಲವೊಮ್ಮೆ ಹೊಟ್ಟೆ ಹುಣ್ಣಾಗುವಂತೆ ನಕ್ಕು ಎಲ್ಲರೂ ಸಂಭ್ರಮಿಸಿದ ಕಾರ್ಯಕ್ರಮ ಇದಾಗಿತ್ತು.🤗👍
ಕ್ರೀಡಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಪದ್ಮಾಂಬ ಮಹಿಳಾ ಸಮಾಜದ ಸಂಸ್ಥಾಪಕರಾದ
ಶ್ರೀಮತಿ ಉಷಾ ಜೈಪ್ರಕಾಶ್, ಪದ್ಮಾಂಬ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ವರ್ಷ ಸುಧೀರ್, ಹಾಗೂ ಖಜಾಂಚಿಯಾದ ಶ್ರೀಮತಿ ಚೇತನಾ ಪದ್ಮರಾಜ್, ಉಪಾಧ್ಯಕ್ಷರಾದ ಶ್ರೀಮತಿ ದೀಪಾ ಬೇತೂರ್, ಕಾರ್ಯದರ್ಶಿಯಾದಂತ ಶ್ರೀಮತಿ ಸುಹಾಸಿನಿ ದೀಪಕ್ ಹಾಗೂ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾದಂತ ಶ್ರೀಮತಿ ಪದ್ಮಾ ಪ್ರಕಾಶ್ ರವರು ಹಾಗೂ ಕಾರ್ಯದರ್ಶಿಯಾದಂತ ಶ್ರೀಮತಿ ಹರ್ಷ ನಾಗರಾಜ್ ಮತ್ತು ಎಲ್ಲ ಸದಸ್ಯೆಯರು ಉಪಸ್ಥಿತರಿದ್ದರು ಕಾರ್ಯಕ್ರಮವು ತುಂಬಾ ಯಶಸ್ವಿಯಾಗಿ ಮೂಡಿಬಂದಿತು 🙏🏻