ದಿನಾಂಕ 18.01.2026ನೇ ಆದಿತ್ಯವಾರ 03:00 ಗಂಟೆಗೆ ಯಾತ್ರಿನಿವಾಸದಲ್ಲಿ ನಮ್ಮ ಬ್ರಾಹ್ಮೀ ಜೈನ ಮಹಿಳಾ ಸಮಾಜದ ಮಾಸಿಕ ಸಭೆ
ದಿನಾಂಕ 18.01.2026ನೇ ಆದಿತ್ಯವಾರ 03:00 ಗಂಟೆಗೆ ಯಾತ್ರಿನಿವಾಸದಲ್ಲಿ ನಮ್ಮ ಬ್ರಾಹ್ಮೀ ಜೈನ ಮಹಿಳಾ ಸಮಾಜದ ಮಾಸಿಕ ಸಭೆ
ದಿನಾಂಕ 18.01.2026ನೇ ಆದಿತ್ಯವಾರ 03:00 ಗಂಟೆಗೆ ಯಾತ್ರಿನಿವಾಸದಲ್ಲಿ ನಮ್ಮ ಬ್ರಾಹ್ಮೀ ಜೈನ ಮಹಿಳಾ ಸಮಾಜದ ಮಾಸಿಕ ಸಭೆ ಮತ್ತು ಮಹಿಳೆಯರಿಗೆ ಬರುವ ಕ್ಯಾನರ್ ನ ಬಗ್ಗೆ ಮಾಹಿತಿ ಕಾಯ೯ಕ್ರಮ ನಡೆಯಿತು. ಕಾಯ೯ಕ್ರಮದಲ್ಲಿ ಶ್ರೀಮತಿ ಸುಪ್ರಿಯಾ ನಿಮ೯ಲ್ ಕುಮಾರ್ ಪ್ರಾಥಿ೯ಸಿದರು. ಸ್ವಾಗತವನ್ನು ಕಾಯ೯ದಶಿ೯ ಶ್ರೀಮತಿ ದೀಪಶ್ರೀ ಕತ್ತೋಡಿ ನಡೆಸಿದರು. ಗೌರವ ಉಪಸ್ಥಿತಿಯನ್ನು ಅಖಿಲ ಕನಾ೯ಟಕ ಜೈನ ಮಹಿಳಾ ಒಕ್ಕೂಟದ ನಿದೇ೯ಶಕಿಯಾದ ಶ್ರೀಮತಿ ಸರೋಜಾ ಜಿ.ಜೈನ್ ಹಾಗೂ ನಮ್ಮ ಗೌರವ ಸಲಹೆಗಾರರಾದ ಶ್ರೀಮತಿ ರಾಜೇಶ್ವರಿ ವಿ.ಅಧಿಕಾರಿಯವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ|ಪ್ರಣಮ್ಯ MBBS MD In General Medicine . ಜೈನ್ ಮೆಡಿಕಲ್ ಸೆಂಟರ್ ಮೂಡುಬಿದ್ರಿ . ಕ್ಯಾನ್ಸರ್ ಮುಖ್ಯವಾಗಿ (ಸ್ತನ ,ಗಭಾ೯ಶಯ)ದಲ್ಲಿ ಬರಲು ಕಾರಣ, ಲಕ್ಷಣಗಳು, ಇರುವ ಚಿಕಿತ್ಸೆ ಹಾಗೂ ಮುಂಜಾಗ್ರತ ಕ್ರಮಗಳ ಹಾಗೂ ಸ್ವ-ಪರೀಕ್ಷೆಯ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಹಾಗೂ ನಮ್ಮೆಲ್ಲರಲ್ಲಿ ಇರುವ ಸಂದೇಹಗಳಿಗೆ ಉತ್ತರವನ್ನು ನೀಡಿದರು. ಸ್ತನಗಳ ಸ್ವ-ಪರೀಕ್ಷೆಯ ಬಗ್ಗೆ pamplet ಬಂದ ಸದಸ್ಯರೆಲ್ಲರಿಗೂ ನೀಡಲಾಯಿತು. ಮುಖ್ಯ ಅತಿಥಿಗಳಿಗೆ ನಮ್ಮೆಲ್ಲರ ಪರವಾಗಿ ಗೌರವಾಪ೯ಣೆ ನಡೆಸಲಾಯಿತು. ಹಾಗೂ ಜಿನಭಜನೆಯಲ್ಲಿ ಸೆಮಿಫಿನಾಲೆ ಹಾಗೂ ಫಿನಾಲೆಗೆ ಹೋದ ನಮ್ಮ ಮಕ್ಕಳ ತಂಡಗಳಿಗೆ ಅಭಿನಂದಿಸಲಾಯಿತು. ಅಖಿಲ ಕನಾ೯ಟಕ ಜೈನ ಮಹಿಳಾ ಒಕ್ಕೂಟದ ನಿದೇ೯ಶಕಿಯಾದ ಶ್ರೀಮತಿ ಸರೋಜಾ ಜಿ. ಜೈನ್ ರವರು ನಮ್ಮನ್ನು ಉದ್ದೇಶಿಸಿ ಪ್ರೋತ್ಸಾಹದ ನುಡಿಗಳನ್ನಾಡಿದರು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಧ್ಯಕ್ಷರಾದ ಶ್ರೀಮತಿ ಸುನೀತಾ ಶಾಂತಿಪ್ರಸಾದ್ ಅವರು ನಿಮ್ಮೆಲ್ಲರ ಸಹಕಾರ ಹೀಗೆ ಇರಲಿ ಎಂದರು.ನಂತರ ಮಕ್ಕಳಿಂದ ಹಾಗೂ ಸದಸ್ಯರಿಂದ ಜಿನಭಜನೆ ನಡೆಯಿತು. ಶ್ರೀಮತಿ ಪ್ರತಿಮಾ ಸಂತೋಷ್ ಧನ್ಯವಾದವಿತ್ತರು. ಉಪಾಧ್ಯಕ್ಷರಾದ ಶ್ರೀಮತಿ ಸಂಧ್ಯಾ ಸುಕುಮಾರ್ ಕಾಯ೯ಕ್ರಮ ನಿರೂಪಿಸಿದರು.