ದಿನಾಂಕ 20.06.2026 ಶನಿವಾರದಂದು ನಮ್ಮ ಬ್ರಾಹ್ಮೀ ಜೈನ ಮಹಿಳಾ ಸಮಾಜದಲ್ಲಿ ಮಾಸಿಕ ಸಭೆ
ದಿನಾಂಕ 20.06.2026 ಶನಿವಾರದಂದು ನಮ್ಮ ಬ್ರಾಹ್ಮೀ ಜೈನ ಮಹಿಳಾ ಸಮಾಜದಲ್ಲಿ ಮಾಸಿಕ ಸಭೆ
ಕಾಯ೯ಕ್ರಮ 4: ದಿನಾಂಕ 20.06.2026 ಶನಿವಾರದಂದು ನಮ್ಮ ಬ್ರಾಹ್ಮೀ ಜೈನ ಮಹಿಳಾ ಸಮಾಜದಲ್ಲಿ ಮಾಸಿಕ ಸಭೆ ,ವನಮಹೋತ್ಸವ ಆಚರಣೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡುವ ಕಾಯ೯ಕ್ರಮ ನಡೆಯಿತು. ಈ ಕಾಯ೯ಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಸುನೀತಾ ಶಾಂತಿಪ್ರಸಾದ್ ವಹಿಸಿದ್ದರು. ಕಾಯ೯ಕ್ರಮವು ಶ್ರೀಮತಿ ಸುನೀತಾ ಬಲ್ಲಾಳ್ ಅವರ ಪ್ರಾಥ೯ನೆಯೊಂದಿಗೆ ಆರಂಭಗೊಂಡಿತು. ಗೌರವ ಉಪಸ್ಥಿತಿಯನ್ನು ಶ್ರೀಮತಿ ರಾಜೇಶ್ವರಿ ವಿ.ಅಧಿಕಾರಿ ವಹಿಸಿದ್ದರು.ಕಾಯ೯ಕ್ರಮಕ್ಕೆ ಸ್ವಾಗತವನ್ನು ಬ್ರಾಹ್ಮೀ ಸಮಾಜದ ಕಾಯ೯ದಶಿ೯ ಶ್ರೀಮತಿ ದೀಪಶ್ರೀ ಜೈನ್ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಅಶ್ವಿತ್ ಉಪವಲಯ ಅರಣ್ಯಾಧಿಕಾರಿಗಳು ಆಗಮಿಸಿದ್ದರು. ವನಮಹೋತ್ಸವದ ಸಾಂಕೇತಿಕವಾಗಿ ಬಸದಿ ಬಳಿ ಸಂಪಿಗೆ ಹೂವಿನ ಗಿಡವನ್ನು ನೆಡಲಾಯಿತು.ಅವರು ಅರಣ್ಯ ಸಂರಕ್ಷಣೆಯ ಬಗ್ಗೆ ಮತ್ತು ಅದರ ಅಗತ್ಯದ ಬಗ್ಗೆ ಮಾಹಿತಿ ನೀಡಿದರು. ಅವರಿಗೆ ಗೌರವಾಪ೯ಣೆ ಸಲ್ಲಿಸಲಾಯಿತು. ಧನ್ಯವಾದವನ್ನು ಶ್ರೀಮತಿ ಆಶಾಲತಾ ನಡೆಸಿದರು. ಮುಖ್ಯ ಅತಿಥಿಗಳು ನಮ್ಮ ಬ್ರಾಹ್ಮೀ ಸಮಾಜದ ಸದಸ್ಯರೆಲ್ಲರಿಗೂ ಗಿಡಗಳನ್ನು ವಿತರಿಸಿದರು. ಕಾಯ೯ಕ್ರಮ ನಿರೂಪಣೆಯನ್ನು ಶ್ರೀಮತಿ ಸಂಧ್ಯಾ ಸುಕುಮಾರ್ ನಡೆಸಿದರು. ಶಾಂತಿ ಮಂತ್ರದೊಂದಿಗೆ ಕಾಯ೯ಕ್ರಮ ಮುಕ್ತಾಯಗೊಂಡಿತು.