ನವರಾತ್ರಿ ಹಬ್ಬದ ವಿಶೇಷವಾಗಿ 💃ಕೋಲಾಟ ಸ್ಪರ್ಧೆಯನ್ನು💃 ಒಕ್ಕೂಟದ ಮಹಿಳಾ ಸಮಾಜಗಳ ಸದಸ್ಯೆಯರಿಗೆ ಹಮ್ಮಿಕೊಳ್ಳಲಾಗಿತ್ತು.

ನವರಾತ್ರಿ ಹಬ್ಬದ ವಿಶೇಷವಾಗಿ 💃ಕೋಲಾಟ ಸ್ಪರ್ಧೆಯನ್ನು💃 ಒಕ್ಕೂಟದ ಮಹಿಳಾ ಸಮಾಜಗಳ ಸದಸ್ಯೆಯರಿಗೆ ಹಮ್ಮಿಕೊಳ್ಳಲಾಗಿತ್ತು.

ಸರ್ವರಿಗೂ ಜೈಜಿನೇಂದ್ರ🙏
ಶುಭದಿನ

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಪದಾಧಿಕಾರಿಗಳು, ಸರ್ವ ನಿರ್ದೇಶಕರು, ಸಮಸ್ತ ಮಹಿಳಾ ಸಮಾಜಗಳ ಅಧ್ಯಕ್ಷರು ಹಾಗೂ ಸದಸ್ಯೆಯರ ಗಮನಕ್ಕೆ🙏

ಮಾನ್ಯರೇ
ತಮ್ಮೆಲ್ಲರಿಗೂ ತಿಳಿದಿರುವ ಹಾಗೆ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ವತಿಯಿಂದ ದಸರಾ/ನವರಾತ್ರಿ ಹಬ್ಬದ ವಿಶೇಷವಾಗಿ 💃ಕೋಲಾಟ ಸ್ಪರ್ಧೆಯನ್ನು💃 ಒಕ್ಕೂಟದ ಮಹಿಳಾ ಸಮಾಜಗಳ ಸದಸ್ಯೆಯರಿಗೆ ಹಮ್ಮಿಕೊಳ್ಳಲಾಗಿತ್ತು. ನಮಗೆ ಒಳ್ಳೆಯ ಪ್ರತಿಕ್ರಿಯೆ ಗಳು ದೊರಕಿದವು. ಅನೇಕ ಮಹಿಳಾ ಮಹಿಳಾ ಸಮಾಜಗಳು ಅತ್ಯುತ್ಸಾಹದಿಂದ ಭಾಗವಹಿಸಿ ಸ್ಪರ್ಧೆಯನ್ನು ಯಶಸ್ಸು ಗೊಳಿಸಿದ್ದಾರೆ. ಸರ್ವರಿಗೂ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಜೈಜಿನೇಂದ್ರಗಳು.🙏

 ಶ್ರೀಮತಿ ಬಿಂದು ಜೈನ್ (ಕೋಲಾಟ ನೃತ್ಯದಲ್ಲಿ ಅತ್ಯುತ್ತಮ ಪರಿಣಿತಿ ಹೊಂದಿದವರು) ದಾವಣಗೆರೆ. ಇವರು ತೀರ್ಪುಗಾರರಾಗಿ ತಮ್ಮ ಕಾರ್ಯವನ್ನು ಪ್ರಾಮಾಣಿಕ ವಾಗಿ ನಿರ್ವಹಿಸಿದ್ದಾರೆ. ಅವರಿಗೆ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ ಹಾಗೂ ನಮ್ಮೆಲ್ಲರ ವತಿಯಿಂದ ಹೃತ್ಪೂರ್ವಕ ಜೈಜಿನೇಂದ್ರ 🙏

ಕೋಲಾಟ ನೃತ್ಯಕ್ಕೆ💃 ಈ ರೀತಿ ಅಂಕಗಳನ್ನು ವಿಭಜನೆ ಮಾಡಲಾಗಿದೆ.
1)ನೃತ್ಯ ಹಾಗೂ ಸಂಗೀತದ ಸಂಯೋಜನೆ ಮತ್ತು ಹೊಂದಾಣಿಕೆ  - 3 ಅಂಕಗಳು.
2) ವೇಷ ಭೂಷಣಗಳು - 2 ಅಂಕಗಳು.
3) ಕೋಲಾಟ ನೃತ್ಯ💃 - 5 ಅಂಕಗಳು.
ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ, ತೀರ್ಪು ನೀಡಲಾಗಿದೆ.
ತೀರ್ಪುಗಾರರ ನಿರ್ಣಯವೇ ಅಂತಿಮ

1)ಪ್ರಥಮ ಬಹುಮಾನ - 5000 Rs
2)ದ್ವಿತೀಯ ಬಹುಮಾನ - 4000 Rs
3)ತೃತೀಯ ಬಹುಮಾನ - 3000 Rs
4)ಸಮಾಧಾನಕರ ಬಹುಮಾನ - 1000 Rs

ತಾವೆಲ್ಲರೂ ಅತ್ಯಂತ ಕುತೂಹಲದಿಂದ ಹಾಗೂ ಉತ್ಸಾಹ ದಿಂದ ಕಾಯುತ್ತಿರುವ, ಬಹುಮಾನ ವಿಜೇತ ಮಹಿಳಾ ಸಮಾಜಗಳ ತಂಡಗಳು ಈ ಕೆಳಕಂಡಂತೆ ಇವೆ.🥰

1)ಪ್ರಥಮ ಬಹುಮಾನ.🥇
 ಬ್ರಾಹ್ಮೀ ಮಹಿಳಾ ಸಮಾಜ. ವೇಣೂರು

2)ದ್ವಿತೀಯ ಬಹುಮಾನ🥈
 ಪದ್ಮಾಂಬ  ಮಹಿಳಾ ಸಮಾಜ. ದಾವಣಗೆರೆ

3)ತೃತೀಯ ಬಹುಮಾನ.🥉
 ಶಾಂತಿಶ್ರೀ ಮಹಿಳಾ ಸಮಾಜ. ಬೆಳ್ತಂಗಡಿ 

4)ಸಮಾಧಾನಕರ ಬಹುಮಾನ🏅
 ಸುಭೂಷಣಮತಿ ಮಹಿಳಾ ಸಮಾಜ. ಕಲಘಟಗಿ

ಬಹುಮಾನ ವಿಜೇತ ತಂಡಗಳ ಮಹಿಳಾ ಸಮಾಜಗಳಿಗೆ ಹಾಗೂ ಸದಸ್ಯೆಯರೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಸಪ್ರೇಮ ಜೈಜಿನೇಂದ್ರಗಳು💐❤️🙏

ವಿಶೇಷ ಸೂಚನೆ :- ಬಹುಮಾನಗಳನ್ನು, ವಿಜೇತ ತಂಡಗಳ ಮಹಿಳಾ ಸಮಾಜಗಳಿಗೆ ತಲುಪಿಸುವ ಬಗ್ಗೆ, ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಖಜಾಂಚಿ, ಶ್ರೀಮತಿ ರೂಪ ಸಂಜಯ್ ಹಜಾರೆ ಯವರು, ವಿಜೇತ ಮಹಿಳಾ ಸಮಾಜಗಳ ಅಧ್ಯಕ್ಷರನ್ನು ಮುಂಬರುವ ಸದ್ಯದಲ್ಲೇ ಸಂಪರ್ಕಿಸುತ್ತಾರೆ.

ವಿಶೇಷ ಸೂಚನೆ : ಕೋಲಾಟ ಸ್ಪರ್ಧೆಯ ವಿಜೇತ ತಂಡಗಳ ನೃತ್ಯವನ್ನು ರತ್ನತ್ರಯ ಕಾರ್ಯಕ್ರಮದಲ್ಲಿ ( ಚಂದನ ವಾಹಿನಿ) ಪ್ರಸಾರಮಾಡಲಾಗುವುದು.🥰

ಸೂಚನೆ - ದಯವಿಟ್ಟು ಈ ವಿಭಾಗದ ನಿರ್ದೇಶಕರು ತಮಗೆ ಸಂಬಂಧಿಸಿದ ಎಲ್ಲಾ ಮಹಿಳಾ ಸಮಾಜಗಳ ಅಧ್ಯಕ್ಷರಿಗೆ ಹಾಗೂ ಸದಸ್ಯೆಯರಿಗೆ ವಿಷಯವನ್ನು ತಿಳಿಸಬೇಕಾಗಿ ವಿನಂತಿ🙏

ಈ ಕಾರ್ಯಕ್ರಮವು ಯಶಸ್ವಿಯಾಗಲು ಪ್ರೋತ್ಸಾಹಿಸಿದ ಮಾತೋಶ್ರೀ ಡಾ. ಹೇಮಾವತಿ ಹೆಗ್ಗಡೆ, ಶ್ರೀಮತಿ ಅನಿತಾ ಸುರೇಂದ್ರಕುಮಾರ್, ಹಾಗೂ ಕಾರ್ಯಕ್ರಮದ ಪರಿಕಲ್ಪನೆಗಾರರಾದ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪದ್ಮಪ್ರಕಾಶ್ ಅವರಿಗೂ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಹೃತ್ಪೂರ್ವಕ ಹಾಗೂ ಸಪ್ರೇಮ ಜೈಜಿನೇಂದ್ರಗಳು.🙏🙏



 Download Pdf