ಪದ್ಮಾಂಬ  ಮಹಿಳಾ ಸಮಾಜದ ವತಿಯಿಂದ ಧ್ವಜಾರೋಹಣ ಮಾಡುವುದರ ಮೂಲಕ ಹಾಗೆ ಗಿಡವನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ಪದ್ಮಾಂಬ  ಮಹಿಳಾ ಸಮಾಜದ ವತಿಯಿಂದ ಧ್ವಜಾರೋಹಣ ಮಾಡುವುದರ ಮೂಲಕ ಹಾಗೆ ಗಿಡವನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

prayer thumb
ದೇಶಕ್ಕಾಗಿ ಧ್ವಜ ಭವಿಷ್ಯಕ್ಕಾಗಿ ಮರ ಎಂಬ ನಾಣ್ನುಡಿಯಂತೆ ಇಂದು ಪದ್ಮಾಂಬ  ಮಹಿಳಾ ಸಮಾಜದ ವತಿಯಿಂದ ಧ್ವಜಾರೋಹಣ ಮಾಡುವುದರ ಮೂಲಕ ಹಾಗೆ ಗಿಡವನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು 
 ಮುಖ್ಯ ಅತಿಥಿಗಳಾಗಿ ಡಾ. ಲೀಲಾವತಿ ಹಾಗೂ ಸವಿತಾ ಅಭಿನಂದನ್ ಅವರು ಆಗಮಿಸಿದರು ಮುಖ್ಯ ಅತಿಥಿ ಡಾಕ್ಟರ್ ಲೀಲಾವತಿ ಅವರ ಕೈಯಿಂದ ಗಿಡವನ್ನು ನೆಟ್ಟಿಸಿದೆವು ಅದಕ್ಕೆ ಪದ್ಮಾಂಬ ಮಹಿಳಾ ಸಮಾಜದ ಸದಸ್ಯರು ಎಲ್ಲರೂ ಕೈಜೋಡಿಸಿದರು ಹಾಗೂ ದಾವಣಗೆರೆ ಗಾನ ಕೋಗಿಲೆ ಆದಂತ ಶ್ರೀಮತಿ ಸವಿತಾ ಅಭಿನಂದನ ಅವರು ದೇಶಭಕ್ತಿ ಗೀತೆಯನ್ನು ಹಾಡಿದರು 
 ಈ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪದ್ಮಪ್ರಕಾಶ್ ಹಾಗೂ ಖಜಾಂಚಿ ಶ್ರೀಮತಿ ರೂಪ ಹಜಾರೆ ಹಾಗೂ ಸಹಕಾರ್ಯದರ್ಶಿ ಶ್ರೀಮತಿ ಕವಿತಾ ಧರಣೇಂದ್ರ ಪ್ರಸಾದ್ ಪದ್ಮಾಂಬ ಮಹಿಳಾ ಸಮಾಜದ ಕಾರ್ಯದರ್ಶಿ ಸುಹಾಸಿನಿ ದೀಪಕ್ ಹಾಗೂ ಸಂಸ್ಥಾಪಕರಾದಂತ ಉಷಾ ಜೈಪ್ರಕಾಶ್ ಹಾಗೂ ಉಪಾಧ್ಯಕ್ಷರಾದಂತ ದೀಪಾ ಬೇತೂರ್ ಉಪಸ್ಥಿತರಿದ್ದರು ಕಾರ್ಯಕ್ರಮವು ತುಂಬಾ ಯಶಸ್ವಿಯಾಗಿ ಮೂಡಿಬಂದಿತು 🙏🏻🙏🏻 ಜೈ ಜಿನೇಂದ್ರ 🙏🏻🙏🏻