ಪದ್ಮಾಂಬ ಮಹಿಳಾ ಸಮಾಜ ದಾವಣಗೆರೆ ಹಾಗೂ ದಾವಣಗೆರೆ ಜೈನ್ ಮಿಲನ್ ವತಿಯಿಂದ 70 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ
ಪದ್ಮಾಂಬ ಮಹಿಳಾ ಸಮಾಜ ದಾವಣಗೆರೆ ಹಾಗೂ ದಾವಣಗೆರೆ ಜೈನ್ ಮಿಲನ್ ವತಿಯಿಂದ 70 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ
ಪದ್ಮಾಂಬ ಮಹಿಳಾ ಸಮಾಜ ದಾವಣಗೆರೆ ಹಾಗೂ ದಾವಣಗೆರೆ ಜೈನ್ ಮಿಲನ್ ವತಿಯಿಂದ 70 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು💛❤️
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀಮತಿ ಸಂಧ್ಯಾ ಸುರೇಶ್ ಸಾಹಿತಿ & ಶಿಕ್ಷಕಿ ಅವರು,ಕರ್ನಾಟಕ ಏಕೀಕರಣದ ಬಗ್ಗೆ ಹೇಳುತ್ತಾ,ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿ, ಕನ್ನಡ ನಾಡಿನ ಹಿರಿಮೆ ಗರಿಮೆಗಳನ್ನು, ಅದ್ಭುತವಾಗಿ ತಿಳಿಸಿದರು.ಕನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ,ವೀರ ಜೈನ ಮಹಿಳೆಯರು ಹೀಗೆ ಅನೇಕ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಯಿತು.👍🙏
ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪದ್ಮಾಪ್ರಕಾಶ್, ಕಾರ್ಯದರ್ಶಿ ಶ್ರೀಮತಿ ಹರ್ಷ ನಾಗರಾಜ್, ಶ್ರೀಮತಿ ಉಷಾ ಜೈಪ್ರಕಾಶ್, ಶ್ರೀಮತಿ ಚೇತನ, ಶ್ರೀ ಶಾಂತರಾಜ್ ಹಾಗೂ ಅನೇಕ ಸದಸ್ಯರು ಉಪಸ್ಥಿತರಿದ್ದರು.🙏
ಕನ್ನಡ ಕವನಗಳನ್ನು ಶ್ರೀ ಲಲಿತ್ ಕುಮಾರ್ ಜೈನ್ ಅವರು ವಾಚಿಸಿದರು.📖 ನಾಡಗೀತೆಯನ್ನು ಶ್ರೀಮತಿ ಜ್ಯೋತಿ ಹಾಗೂ ಶ್ರೀಮತಿ ಜ್ವಾಲ ಹಾಡಿದರು.