ಬ್ರಾಹ್ಮೀ ಜೈನ ಮಹಿಳಾ ಸಮಾಜ, ವೇಣೂರು

ಬ್ರಾಹ್ಮೀ ಜೈನ ಮಹಿಳಾ ಸಮಾಜ, ವೇಣೂರು

prayer thumb
ದಿನಾಂಕ 28.02.2026ನೇ ಶನಿವಾರ 3 ಗಂಟೆಗೆ ಯಾತ್ರಿನಿವಾಸದಲ್ಲಿ  ಬ್ರಾಹ್ಮೀ ಜೈನ ಮಹಿಳಾ ಸಮಾಜದ ಮಾಸಿಕ ಸಭೆ ಹಾಗೂ ಮಾಹಿತಿ ಕಾಯ೯ಕ್ರಮ( ಮಕ್ಕಳಿಗೆ ಪರೀಕ್ಷೆ ಮತ್ತು ಎದುರಿಸುವ ಬಗ್ಗೆ) ನಡೆಯಿತು. ಕಾಯ೯ಕ್ರಮದ ಗೌರವ ಉಪಸ್ಥಿತಿಯನ್ನು ಅಖಿಲ ಕನಾ೯ಟಕ  ಜೈನ ಮಹಿಳಾ  ಒಕ್ಕೂಟದ ನಿದೇ೯ಶಕರಾದ ಶ್ರೀಮತಿ ಸರೋಜಾ ಜಿ.ಜೈನ್‌ ಹಾಗೂ ಶ್ರೀಮತಿ ರಾಜೇಶ್ವರಿ ವಿ.ಅಧಿಕಾರಿ ವಹಿಸಿದ್ದರು.  ಕಾಯ೯ಕ್ರಮದಲ್ಲಿ ಪ್ರಾಥ೯ನೆಯನ್ನು  ಶ್ರೀಮತಿ ಹೇಮಸುಭಾಸ್‌ ನಡೆಸಿದರು.   ಸ್ವಾಗತವನ್ನು  ಶ್ರೀಮತಿ ಆಶಾಲತಾ ನಡೆಸಿದರು. ಗತ ಕಾಯ೯ಕ್ರಮದ ವರದಿ ಮತ್ತು ಲೆಕ್ಕ-ಪತ್ರವನ್ನು ಜತೆ ಕಾಯ೯ದಶಿ೯ಗಳಾದ ಶ್ರೀಮತಿ ನಿಮ೯ಲಾ ಪ್ರಭಾಚಂದ್ರ ವಾಚಿಸಿದರು.  ಇಂದಿನ ಕಾಯ೯ಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಮ್ಮ ಬ್ರಾಹ್ಮೀ ಸಮಾಜದ ಉಪಾಧ್ಯಕ್ಷರು  ಶ್ರೀಮತಿ ಸಂಧ್ಯಾಸುಕುಮಾರ್‌  ಇವರು ತಮ್ಮ ಪ್ರೌಢಶಾಲಾ  ಶಿಕ್ಷಕಿ ವೃತ್ತಿಯಲ್ಲಿ ಸುಮಾರು 22 ವಷ೯ಗಳ ಅನುಭವವಿದೆ. ಇವರು ಮಕ್ಕಳಿಗೆ ಪರೀಕ್ಷಾ ಪೂವ೯ತಯಾರಿಯ ಬಗ್ಗೆ ಹೇಗೆ ಓದಿ ಮನನ ಮಾಡಬೇಕು ಎಂದು ಸವಿವರವಾಗಿ ತಿಳಿಸಿ, ಆತ್ಮವಿಶ್ವಾಸದಿಂದ  ಭಯವನ್ನು ಬಿಟ್ಟು ಪರೀಕ್ಷೆಯನ್ನು ಎದುರಿಸುವ ಬಗ್ಗೆ  ಮಾಹಿತಿ  ನೀಡಿದರು. ಇವರಿಗೆ ಗೌರವಾಪ೯ಣೆ ನಡೆಸಲಾಯಿತು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಸುನೀತಾ ಶಾಂತಿಪ್ರಸಾದ್‌  ಎಲ್ಲರ ಸಹಕಾರಕ್ಕೆ ಧನ್ಯವಾದ ಹೇಳಿದರು. ಶ್ರೀಮತಿ ಮಮತಾ ಪ್ರಸಾದ್‌ ಧನ್ಯವಾದ  ಕಾಯ೯ಕ್ರಮ ನಡೆಸಿದರು.