ವೀರರಾಣಿ ಅಬ್ಬಕ್ಕ ಮಹಿಳಾ ಸಂಘ ಮಂಗಳೂರು

ವೀರರಾಣಿ ಅಬ್ಬಕ್ಕ ಮಹಿಳಾ ಸಂಘ ಮಂಗಳೂರು

ಎಲ್ಲರಿಗೂ ಜೈ ಜಿನೇಂದ್ರ 
ವೀರರಾಣಿ ಅಬ್ಬಕ್ಕ ಮಹಿಳಾ ಸಂಘ ಮಂಗಳೂರು
ಸ್ವಾತಂತ್ರ್ಯ ಹೋರಾಟದಲ್ಲಿ ತುಳುನಾಡಿನ ರಾಣಿ ಉಳ್ಳಾಲದ ಅಬ್ಬಕ್ಕ ತೋರಿದ ಕಿಚ್ಚು ಅಪ್ರತಿಮವಾದುದು. ಭಾರತದ ಸ್ವಾತಂತ್ರ್ಯ ಚಳುವಳಿಯನ್ನು ದಾಖಲು ಮಾಡುವಾಗ 1857 ಸಿಪಾಯಿ ದಂಗೆ ಮೊದಲ ಸ್ವಾತಂತ್ರ್ಯ ಹೋರಾಟ ಎಂಬುದಾಗಿ ಹೇಳಲಾಗುತ್ತದೆ. ವಾಸ್ತವದಲ್ಲಿ ಪ್ರಾದೇಶಿಕವಾಗಿ ಇದ್ದ ನೂರಾರು ಅರಸು ಮನೆತನಗಳು ತಮ್ಮ ರಾಜ್ಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹೋರಾಟಗಳನ್ನು ನಡೆಸುತ್ತಲೇ ಬಂದರು.       ಪೋರ್ಚುಗೀಸರು ಅಗಾಧವಾದ ಸೈನ್ಯಬಲ, ಮದ್ದುಗುಂಡುಗಳು, ಆಧುನಿಕ ಶಸ್ತ್ರಾಸ್ತ್ರಗಳು, ವಿಸ್ತಾರವಾದ ಸಾಮ್ರಾಜ್ಯ ಹೊಂದಿದ್ದರೂ ಕೂಡ ಅಬ್ಬಕ್ಕಳ ವಿರುದ್ದ ತಾವೇ ಯುದ್ದ ಸಾರಿ ಸೋಲೊಪ್ಪಿಕೊಳ್ಳಬೇಕಾಯಿತು. ಹಾಗಾಗಿ ಇಂದಿಗೂ ಯೊರೋಪ್ ದೇಶದ ಪೋರ್ಚುಗಲ್ ಚರಿತ್ರೆಯನ್ನು ಓದುವಾಗ ರಾಣಿ ಅಬ್ಬಕ್ಕಳ ಹೆಸರು ಚಿರಸ್ಥಾಯಿ ಯಾಗಿ ಉಳಿದಿದೆ.                          ಅಂತಹ ವೀರನಾಡಿನಲ್ಲಿ ಹುಟ್ಟಿದ ಮತ್ತು ನಾಮಧೇಯವನ್ನು ಇಟ್ಟುಕೊಂಡ ನಮ್ಮ ವೀರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘವು 80 ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ನಮ್ಮ ಮಹಿಳಾ ಸಂಘದಲ್ಲಿ ಧ್ವಜಾರೋಹಣದ ಮೂಲಕ, ಗಿಡಗಳನ್ನು ನೆಡುವುದರ ಮೂಲಕ, ಮುಖ್ಯವಾಗಿ ನಮ್ಮ ಬಸದಿಯನ್ನು ಸ್ವಚ್ಛತೆ ಮಾಡುವುದರ ಮೂಲಕ, ರಾಷ್ಟ್ರಗೀತೆಯನ್ನು ಹಾಡಿ ಸಿಹಿ ತಿಂಡಿಯನ್ನು ವಿತರಿಸುವುದರ ಮೂಲಕ ಆಚರಿಸಿದೆವು. ನಮ್ಮ ಮಹಿಳಾ ಸಂಘದ ಸ್ವಾತಂತ್ರ್ಯ ದಿನದ ಶಪಥವೆಂದರೆ                
*ಮಹಿಳಾ ಸಂಘದ ಮೂಲಕ ಕಷ್ಟದಲ್ಲಿರುವವರಿಗೆ ಸಹಾಯಹಸ್ತ              
 *ಬಡ ವಿದ್ಯಾರ್ಥಿಗಳಿಗೆ ನೆರವು                      
*ಅನಾರೋಗ್ಯ ಪೀಡಿತರಿಗೆ ಅದರಲ್ಲೂ ಮುಖ್ಯವಾಗಿ ಜೈನರಿಗೆ ಸಹಾಯ ಮಾಡುವುದು.                                        
 *ಹೆಚ್ಛು ಹೆಚ್ಛು ಮಹಿಳೆಯರನ್ನು ಸಂಘಕ್ಕೆ ಸೇರಿಸುವುದರ ಮೂಲಕ ಸದಸ್ಯತ್ವ ಬಲ ಪಡಿಸುವುದು.                                      
* ನಮ್ಮ ಸದಸ್ಯೆಯರಿಗೆ ಉಪಯುಕ್ತ ವಾಗುವಂತಹ ಕಾರ್ಯಕ್ರಮಗಳು ಇತ್ಯಾದಿ