ವೇಣೂರು: ದಿನಾಂಕ 23.11.2025ನೇ ಆದಿತ್ಯವಾರ ಮಾಸಿಕ ಸಭೆ ಮತ್ತು ಮಕ್ಕಳ ದಿನಾಚರಣೆ
ವೇಣೂರು: ದಿನಾಂಕ 23.11.2025ನೇ ಆದಿತ್ಯವಾರ ಮಾಸಿಕ ಸಭೆ ಮತ್ತು ಮಕ್ಕಳ ದಿನಾಚರಣೆ
ವೇಣೂರು: ದಿನಾಂಕ 23.11.2025ನೇ ಆದಿತ್ಯವಾರ ಮಾಸಿಕ ಸಭೆ ಮತ್ತು ಮಕ್ಕಳ ದಿನಾಚರಣೆ ಹಾಗೂ ಮಕ್ಕಳ ಪ್ರತಿಭಾ ಪ್ರದಶ೯ನ ಸಭೆಯ ಅಧ್ಯಕ್ಷತೆಯನ್ನು ಉಪಾಧ್ಯಕ್ಷರಾದ ಶ್ರೀಮತಿ ಸಂಧ್ಯಾ ಸುಕುಮಾರ್ ವಹಿಸಿದ್ದರು. ಗೌರವ ಉಪಸ್ಥಿತಿಯನ್ನು ಶ್ರೀಮತಿ ಪ್ರಸನ್ನಾ ಆರ್ . ಹೆಗ್ಡೆ ವಹಿಸಿದ್ದರು. ಪ್ರಾಥ೯ನೆಯನ್ನು ಕು.ವಧಿ೯ನಿ ನಡೆಸಿದಳು. ಸ್ವಾಗತ ಮಾ.ನಿಶಿತ್ ನಡೆಸಿದನು. ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕು.ವೀಕ್ಷಿತ, ಕು.ಸಂಪ್ರೀತ, ಕು.ಅನಘ, ಹಾಗೂ ಮಾ. ನಿಶಿತ್ ಆಸೀನರಾಗಿದ್ದರು. ಗೌರವಾಪ೯ಣೆ ಕಾಯ೯ಕ್ರಮವನ್ನು ಶ್ರೀಮತಿ ಆಶಾಲತಾ ನಡೆಸಿಕೊಟ್ಟರು. ಮಕ್ಕಳ ದಿನಾಚರಣೆಯ ಮಹತ್ವ ಹಾಗೂ ಮಾಹಿತಿ ಕು.ಸಂಪ್ರೀತ ನಡೆಸಿಕೊಟ್ಟರು. ನಂತರ ಉಪಾಧ್ಯಕ್ಷರು ಅಧ್ಯಕ್ಷೀಯ ನುಡಿಯನ್ನಾಡಿ ಮಕ್ಕಳಿಗೆ ಶುಭ ಹಾರೈಸಿದರು.ಮಕ್ಕಳಿಗೆ ಮಕ್ಕಳ ದಿನಾಚರಣೆಯ ಪ್ರಯುಕ್ತ ರಸಪ್ರಶ್ನೆ ಕಾಯ೯ಕ್ರಮ ಏಪ೯ಡಿಸಲಾಗಿತ್ತು. ನಂತರ ಮಕ್ಕಳಿಂದ ಹಾಡು, ನ್ಥತ್ಯ, ಭರತನಾಟ್ಯ ಕಾಯ೯ಕ್ರಮ ಜರುಗಿತು. ಈ ಕಾಯ೯ಕ್ರಮವು ಮಕ್ಕಳಿಗೋಸ್ಕರ ಏಪ೯ಡಿಸಲಾಗಿತ್ತು. ಮಕ್ಕಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮಗೆಲ್ಲರಿಗೂ ಮನರಂಜನೆಯನ್ನು ನೀಡಿ ತಾವು ಸಂತಸಗೊಂಡರು. ನಂತರ ಮಕ್ಕಳಿಗೆ ವಿವಿಧ ಆಟೋಟ ಸ್ಫಧೆ೯ಗಳು ನಡೆದವು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಬಹುಮಾನ ನೀಡಲಾಯಿತು. ಬ್ರಾಹ್ಮೀ ಜೈನ ಮಹಿಳಾ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಿದರು. ಧನ್ಯವಾದ ಮಾ. ಅಮೋಘ್ ನಡೆಸಿಕೊಟ್ಟನು. ಕಾಯ೯ಕ್ರಮ ನಿರೂಪಣೆಯನ್ನು ಕಾಯ೯ದಶಿ೯ಯವರಾದ ಶ್ರೀಮತಿ ದೀಪಶ್ರೀ ಜೈನ್ ನಡೆಸಿಕೊಟ್ಟರು.