ಸರ್ವ ಮಂಗಳ ಜೈನ ಮಹಿಳಾ ಸಂಘ( ರಿ) ಮೂಡಬಿದಿರೆ
ಸರ್ವ ಮಂಗಳ ಜೈನ ಮಹಿಳಾ ಸಂಘ( ರಿ) ಮೂಡಬಿದಿರೆ
ಸರ್ವ ಮಂಗಳ ಜೈನ ಮಹಿಳಾ ಸಂಘ( ರಿ) ಮೂಡಬಿದಿರೆ ಇದರ ವತಿಯಿಂದ ದಶಲಕ್ಷಣ ಪರ್ವ ಆಚರಣೆ🙏🙏🙏
ದಿನಾಂಕ 16/ 9/ 2026ರಿಂದ ದಿನಾಂಕ 26 /9/ 2026ವರೆಗೆ ಮೂಡಬಿದಿರೆಯ ಗುರುಗಳ ಬಸದಿಯಲ್ಲಿ ದಶಲಕ್ಷಣ ಮಹಾಪರ್ವವನ್ನು ಆಚರಿಸಲಾಯಿತು. ಪ್ರತಿ ದಿನ ಭಗವಾನ್ ಪಾಶ್ವನಾಥ ಸ್ವಾಮಿಗೆ ಕ್ಷೀರಾಭಿಷೇಕ ನಡೆಸಲಾಗುತ್ತಿತ್ತು. ತದನಂತರ ಸಂಘದ ಸದಸ್ಯರು ಅಷ್ಟ ವಿಧಾರ್ಚನೆ ಪೂಜಾ ಕಾರ್ಯದಲ್ಲಿ ಭಾಗವಹಿಸುತ್ತಿದ್ದರು. ದಿನಾಂಕ 25 /9 /2026 ರಂದು ವಿಶೇಷವಾಗಿ 24 ತೀರ್ಥಂಕರರ ಅಭಿಷೇಕ ಹಾಗೂ ಸಿದ್ಧ ಪರಮೇಷ್ಟಿಗಳ ಅಭಿಷೇಕವನ್ನು ನೆರವೇರಿಸಲಾಯಿತು. 26./09/.2026 ಕ್ಷಮಾವಾಣಿ ದಿನ ಸಭಾ ಕಾರ್ಯಕ್ರಮದಲ್ಲಿ ಚೇತನ ಪ್ರಶಾಂತ್ ಹಾಗೂ ಡಾ/ಎಸ್ .ಪಿ. ವಿದ್ಯಾಕುಮಾರ್ ರವರು ದಶಧರ್ಮಗಳ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಸರ್ವ ಮಂಗಳ ಜೈನ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಯಶೋಧರ್, ಹಿರಿಯ ಸದಸ್ಯರಾದ ಚೌಟರ ಅರಮನೆ ವೃಂದರಾಜೇಂದ್ರ, ರಾಜೇಶ್ವರಿ ಸಂಭವ ಕುಮಾರ್ ಹಾಗೂ ಜೈನ್ ಮಿಲನ್ ಕೋಶಾಧಿಕಾರಿಗಳಾದ ಶ್ರೇ ಯಾಂಶ ಹೆಗ್ಡೆ ಭಾಗವಹಿಸಿದ್ದರು. ಪದ್ಮಪ್ರಿಯ ವಿನೋಬಾ ರವರು ಪ್ರಾರ್ಥನೆಗೆ ಗೈದರು. ಸುಜಾತ ಬಳ್ಳಾಲ್ ಸ್ವಾಗತಿಸಿದರು. ಸಂಘದ ಕೋಶಾಧಿಕಾರಿ ವೀರಶ್ರೀ ಸಂಪತ್ ಅತಿಥಿಗಳ ಪರಿಚಯ ಮಾಡಿದರು. ಸಂಘದ ಕಾರ್ಯದರ್ಶಿಗಳಾದ ಆರತಿ ಮಹಾವೀರ್ ರವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಬಳಿಕ ಶುದ್ಧ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು🙏🙏🙏