ಹಂಸಗಾಮಿನಿ ಮಹಿಳಾ ಸಮಾಜ (ರಿ) ಅಥಣಿ
ಹಂಸಗಾಮಿನಿ ಮಹಿಳಾ ಸಮಾಜ (ರಿ) ಅಥಣಿ
80ನೇ ಸ್ವಾತಂತ್ರ್ಯೋತ್ಸವದ ವರದಿ
ಹಂಸಗಾಮಿನಿ ಮಹಿಳಾ ಸಮಾಜ (ರಿ) ಅಥಣಿ
ದಿನಾಂಕ: 15/08/2026
ಸಮಯ: ಬೆಳಿಗ್ಗೆ 8:00
ಬ್ರಿಟಿಷರ
ಸಂಕೋಲೆಯಿಂದ ಭಾರತಮಾತೆಯನ್ನು ಬಿಡುಗಡೆ ಮಾಡಿದ ಈ ಸುದಿನವನ್ನು ಹಂಸಗಾಮಿನಿ ಮಹಿಳಾ ಸಮಾಜದ ಸದಸ್ಯರು ಅತಿ ವಿಜೃಂಭಣೆಯಿಂದ ಆಚರಿಸಿದರು. ಈ ಸಂದರ್ಭದಲ್ಲಿ ಹಂಸಗಾಮಿನಿ ಮಹಿಳಾ ಸಂಘದ ಉಪಾಧ್ಯಕ್ಷರಾದಂತಹ ಶ್ರೀಮತಿ ಶರ್ಮಿಲಾ ಪಾಟೀಲ ಹಾಗೂ ಕಾರ್ಯದರ್ಶಿಗಳಾದ ಶ್ರೀಮತಿ ಶೀಲಾ ಅರುಣ ಯಲಗುದ್ರಿ ಇವರು ಭಾರತ ಮಾತೆಗೆ ಪೂಜೆ ಸಲ್ಲಿಸುವ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ಮಂಡಳದ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಉಪಾಧ್ಯಕ್ಷರಾದಂತಹ ಶ್ರೀಮತಿ ಶರ್ಮಿಲಾ ಪಾಟೀಲ ಇವರು ಧ್ವಜಾರೋಹಣವನ್ನು ನೆರವೇರಿಸಿದರು. ಸದಸ್ಯರೆಲ್ಲರೂ ರಾಷ್ಟ್ರಗೀತೆಯನ್ನ ಹೇಳುವುದರ ಮೂಲಕ ಧ್ವಜವಂದನೆಯನ್ನು ಮಾಡಿದರು. ನಂತರ ಭಾರತ ದೇಶದ ಅಭಿವೃದ್ಧಿ ಹಾಗೂ ವಿಶ್ವ ಬಂದುತ್ವವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಪ್ರಮಾಣವಚನವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟವು ಹಮ್ಮಿಕೊಳ್ಳುವ ಸಮಾಜಮುಖಿ ಕಾರ್ಯಕ್ರಮದ ಬಗ್ಗೆ ಶ್ರೀಮತಿ ದೀಪಾ ನಂದಗಾವ್ ಇವರು ತಮ್ಮ ಭಾಷಣದಲ್ಲಿ ಸವಿಸ್ತಾರವಾಗಿ ತಿಳಿಸಿದರು. ಅಂತಿಮವಾಗಿ "ಹಸಿರೇ ಉಸಿರು" ಎಂಬ ಶೀರ್ಷಿಕೆ ಅಡಿ ಸ್ವಾತಂತ್ರೋತ್ಸವದ ನೆನಪಿಗಾಗಿ ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಪೂರ್ಣ ವಿರಾಮವನ್ನು ನೀಡಲಾಯಿತು. ಒಟ್ಟಿನಲ್ಲಿ ಇವತ್ತಿನ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಮ್ಮೆಲ್ಲರ ಸ್ಮೃತಿ ಪಟಲದಲ್ಲಿ ಉಳಿಯುವಂತಾಯಿತು.
ಯತೋ ಧರ್ಮ: ತತೋ ರಾಷ್ಟ್ರಂ... ಒಂದೇ ಭಾರತಂ...
ಜೈ ಹಿಂದ್....