ಆಧ್ಯಾತ್ಮ ಸರೋವರದ ರಾಜಹಂಸ
ಆಧ್ಯಾತ್ಮ ಸರೋವರದ ರಾಜಹಂಸ
ಆಧ್ಯಾತ್ಮ ಸರೋವರದ ರಾಜಹಂಸ
ಸಂತ ಶಿರೋಮಣಿ ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರ ಪರಮ ಶಿಷ್ಯರಾದ ಪ.ಪೂ ಆಚಾರ್ಯ ಶ್ರೀ 108 ಆರ್ಜವಸಾಗರ ಮಹಾರಾಜರ ಪರಮ ಪ್ರಭಾವಕ ಶಿಷ್ಯರಾದ ಚರ್ಯಾ ಶಿರೋಮಣಿ ಪ.ಪೂ.ಮುನಿ ಶ್ರೀ 108 ವಿದಿತಸಾಗರ ಮಹಾರಾಜರ ದಿವ್ಯ ಸಾನಿದ್ಯವು
ದಾವಣಗೆರೆ ನಗರದ ಶ್ರಾವಕ ಶ್ರಾವಿಕೆಯರಿಗೆ ಲಭಿಸಿದ್ದು ಎಲ್ಲರ ಪುಣ್ಯೋದಯಕ್ಕೆ ಕಾರಣವಾಗಿದೆ .
ಪ್ರತಿ ದಿನ ಬೆಳಗಿನಲ್ಲಿ ಜಿನಮಂದಿರದಲ್ಲಿ ನಿತ್ಯ ಪೂಜೆ, ಅಭಿಷೇಕ, ಸಂಜೆ ಪ್ರವಚನ, ವಾರಾಂತ್ಯದಲ್ಲಿ ವಿವಿಧ ಆರಾಧನೆಗಳು ಮಕ್ಕಳಿಗಾಗಿ ಧಾರ್ಮಿಕ ಶಿಬಿರಗಳು ಮುನಿಗಳ ಆಹಾರಚರ್ಯೆ ವಯ್ಯಾವ್ರತ ಗಳ ಸೇವೆ ಎಲ್ಲಾ ಕಾರ್ಯಾಗಳಲ್ಲೂ ಪದ್ಮಾಂಬ ಮಹಿಳಾ ಸಮಾಜದ ಸರ್ವ ಸದಸ್ಯಿಣಿಯರು ತಮ್ಮ ತನು ಮನ ಧನಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ
ಪ್ರತಿ ದಿನ ಕನಿಷ್ಟ ಎರಡು ಮನೆಯಲ್ಲಾದರೂ ಚೌಕದ ವ್ಯವಸ್ಥೆಯನ್ನು ಮಾಡುತ್ತಾ ಭಕ್ತಿಯಿಂದ ಪಡಗಾಹನ ಪೂರ್ವಕ ಆಹಾರ ದಾನ ನೀಡುತ್ತಿದ್ದಾರೆ .
ಜೈನಂ ಜಯತು ಶಾಸನ