ಕಾಯ೯ಕ್ರಮ 3: ದಿನಾಂಕ 19.10.2025ನೇ ಆದಿತ್ಯವಾರ ಬ್ರಾಹ್ಮೀ ಮಹಿಳಾ ಸಮಾಜದ  ಮಾಸಿಕ ಸಭೆ ಮತ್ತು ಉಪನ್ಯಾಸಕ ಕಾಯ೯ಕ್ರಮ ಜರುಗಿತು.

ಕಾಯ೯ಕ್ರಮ 3: ದಿನಾಂಕ 19.10.2025ನೇ ಆದಿತ್ಯವಾರ ಬ್ರಾಹ್ಮೀ ಮಹಿಳಾ ಸಮಾಜದ  ಮಾಸಿಕ ಸಭೆ ಮತ್ತು ಉಪನ್ಯಾಸಕ ಕಾಯ೯ಕ್ರಮ ಜರುಗಿತು.

prayer thumb
ಕಾಯ೯ಕ್ರಮ 3: ದಿನಾಂಕ 19.10.2025ನೇ ಆದಿತ್ಯವಾರ ಬ್ರಾಹ್ಮೀ ಮಹಿಳಾ ಸಮಾಜದ  ಮಾಸಿಕ ಸಭೆ ಮತ್ತು ಉಪನ್ಯಾಸಕ ಕಾಯ೯ಕ್ರಮ ಜರುಗಿತು. ಕಾಯ೯ಕ್ರ,ಮದ ಅಧ್ಯಕ್ಷತೆಯನ್ನು  ಶ್ರೀಮತಿ ಸುನೀತಾ ಶಾಂತಿಪ್ರಸಾದ್ ವಹಿಸಿದ್ದರು.ಗೌರವ ಉಪಸ್ಥಿತಿಯನ್ನು ಅಖಿಲ ಕನಾ೯ಟಕ ಜೈನ ಮಹಿಳಾ ಒಕ್ಕೂಟದ ನಿದೇ೯ಶಕರಾದ ಶ್ರೀಮತಿ ಸರೋಜಾ ಜಿ.ಜೈನ್‌ ವಹಿಸಿದರು.ಶ್ರೀಮತಿ ಸುನೀತ ಬಲ್ಲಾಳ್‌  ಪ್ರಾಥಿ೯ಸಿದರು. ಕಾಯ೯ದಶಿ೯ ಶ್ರೀಮತಿ ದೀಪಶ್ರೀ ಜಿನಚಂದ್ರ ಸ್ವಾಗತಿಸಿ , ಗೌರವಾಪ೯ಣೆ ನೀಡಿದರು. ಗತ ಕಾಯ೯ಕ್ರಮದ ವರದಿಯನ್ನು ಜತೆ ಕಾಯ೯ದಶಿ೯ ಶ್ರೀಮತಿ ನಿಮ೯ಲಾ ಪ್ರಭಾಚಂದ್ರ ವಾಚಿಸಿದರು. ಲೆಕ್ಕ-ಪತ್ರವನ್ನು ಕೋಶಾಧಿಕಾರಿಯಾದ ಶ್ರೀಮತಿ ಸುಕನ್ಯಾ ಬಲ್ಲಾಳ್‌ ಮಂಡಿಸಿದರು. ಕೋಲಾಟ ಸ್ಫದೆ೯ಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ಅಭಿನಂದಿಸಲಾಯಿತು. ಹಾಗೂ ಸಹಕಾರ ನೀಡಿದವರಿಗೆ ಧನ್ಯವಾದ ಸಮಪ೯ಸಲಾಯಿತು. ಅದರಿಂದ ಬಹುಮಾನವಾಗಿ ಬಂದ ಮೊತ್ತವನ್ನು ಹೊಸದಾಗಿ ಮೈಕ್‌ ಸೆಟ್‌ ತೆಗೆದುಕೊಳ್ಳಲು ಬ್ರಾಹ್ಮೀ ಸಮಾಜಕ್ಕೆ ನೀಡಲಾಯಿತು.  ಬ್ರಾಹ್ಮೀ ಮಹಿಳಾ ಸಮಾಜಕ್ಕೆಹೊಸದಾಗಿ ಸೇಪ೯ಡೆಗೊಂಡವರನ್ನು ಗುಲಾಬಿ ಹೂವನ್ನಿತ್ತು ಸ್ವಾಗತಿಸಲಾಯಿತು. ಹಾಗೂ ರಾಜ್ಯ ಜೈನ ಮಹಿಳಾ ಒಕ್ಕೂಟಕ್ಕೆ ಸೇಪ೯ಡೆಗೊಂಡ ಸದಸ್ಯರಿಗೆ ನಿದೇ೯ಶಕರಾದ ಶ್ರೀಮತಿ ಸರೋಜಾ ಜಿ.ಜೈನ್‌ ಬ್ಯಾಡ್ಜ್‌ ನೀಡಿದರು. ನಿರಂಜನ ಲಹರಿಯವರು ನಡೆಸುವ ಜೈನ ಧಮ೯ದ ಪ್ರಭಂದ ಸ್ಫದೆ೯ಯಲ್ಲಿ ಭಾಗವಹಿಸಿ ಬಹುಮಾನ ಪಡೆದ ನಮ್ಮ ಸದಸ್ಯರಾದ ಶ್ರೀಮತಿ ದೀಪಶ್ರೀ ಮತ್ತು ಶ್ರೀಮತಿ ಪ್ರಿಯಲತ ಅವರಿಗೆ  ಹಾಗೂ ವಿಟ್ಲ ಜಿನಭಜನೆ ಸ್ಪಧೆ೯ಯಲ್ಲಿ ಭಾಗವಹಿಸಿದ ಶ್ರೀಮತಿ ಪದ್ಮಲತ ಹಾಗೂ ಬಹುಮಾನ ಪಡೆದ ಶ್ರೀಮತಿ ಸುಷ್ಮಾ  ಇವರಿಗೆಲ್ಲಾ ಗುಲಾಬಿ ಹೂವನ್ನಿತ್ತು ಅಭಿನಂದಿಸಲಾಯಿತು.                                                   ಉಪನ್ಯಾಸಕರಾಗಿ ಆಗಮಿಸಿದ ಡಾ|ಪ್ರಗತಿ ಹೆಗ್ಡೆಯವರು ಮಹಿಳೆಯರ ಜೀವನದ ಪ್ರಮುಖ ಮೂರು ಹಂತಗಳು (ಋತುಚಕ್ರ) ಈ ವಿಷಯದ  ಬಗ್ಗೆ ಮುಖ್ಯವಾಗಿ ಋತುಚಕ್ರ  ಪ್ರಾರಂಭವಾಗುವ ಹಾಗೂ ಋತುಬಂಧವಾಗುವ ಹಂತದಲ್ಲಿ ನಮ್ಮಲ್ಲಿ ನಡೆಯುವ ದೈಹಿಕ ಹಾಗೂ ಮಾನಸಿಕ  ಬದಲಾವಣೆಗಳ ಬಗ್ಗೆ ಸವಿಸ್ತಾರವಾಗಿ  ವಿವರಿಸಿದರು. ತಾಯ್ತನದ ಸ್ಥಾನ (ಗಭಿ೯ಣಿ)ಪಡೆದಿರುವ  ಡಾ| ಪ್ರಗತಿಯವರಿಗೆ ನಮ್ಮ ಬ್ರಾಹ್ಮೀ ಸಂಘದ ಪರವಾಗಿ ಸಿಹಿತಿಂಡಿ ಹಾಗೂ ಫ್ರೂಟ್ಸ್‌ ನೀಡಿ ಹಿರಿಯರು ಹಾಗೂ ಸದಸ್ಯರೆಲ್ಲರೂ ಆಶೀವ೯ದಿಸಿ ಶುಭ ಹಾರೈಸಿದರು. ಜತೆ ಕೋಶಾಧಿಕಾರಿ ಶ್ರೀಮತಿ ಪ್ರಿಯದಶಿ೯ಣಿ ರಾಜೇಂದ್ರ  ಧನ್ಯವಾದವಿತ್ತರು. ಉಪಾಧ್ಯಕ್ಷರಾದ ಶ್ರೀಮತಿ ಸಂಧ್ಯಾ ಸುಕುಮಾರ್‌ ಕಾಯ೯ಕ್ರಮ ನಿರೂಪಿಸಿದರು.