ಜಿನವಾಣಿ ಮಹಿಳಾ ಸಮಾಜ, ಕಾರ್ಕಳ
ಜಿನವಾಣಿ ಮಹಿಳಾ ಸಮಾಜ, ಕಾರ್ಕಳ
ದಿನಾಂಕ 05.04.2026 ರಂದು ಭಾನುವಾರ ಜಿನವಾಣಿ ಮಹಿಳಾ ಸಮಾಜ, ಕಾರ್ಕಳ ಇದರ ವತಿಯಿಂದ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ವಿಶ್ವ ಮಹಿಳಾ ದಿನಾಚರಣೆಯು ಶ್ರೀಮತಿ ವಿನಯ ಯುವರಾಜ ಆರಿಗ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಆರಂಭದಲ್ಲಿ ಶ್ರೀಮತಿ ಸುಕುಮಾರಿ ಮತ್ತು ಶ್ರೀಮತಿ ಪದ್ಮಲತಾ ಇವರು ಪ್ರಾರ್ಥಿಸಿದರು. ಶ್ರೀಮತಿ ಸುಮನಾಜಿ ಡಿ ಅಧಿಕಾರಿ ಇವರು ಸರ್ವರನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ| ಅಪೇಕ್ಷ ಭಂಡಾರಿ, ಸಹ ಪ್ರಾಧ್ಯಾಪಕರು ಯೆನಪೋಯ ವಿಶ್ವವಿದ್ಯಾನಿಲಯ, ಮಂಗಳೂರು ಇವರು ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಸಂಘಕ್ಕೆ ನೂತನವಾಗಿ ಸೇರ್ಪಡೆಯಾದ ಸದಸ್ಯರುಗಳಿಗೆ ಹೂ ನೀಡಿ ಸ್ವಾಗತಿಸಲಾಯಿತು. ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಅದೇ ರೀತಿ ಸಮಾಜದಲ್ಲಿ ಉತ್ತಮ ಸಾಧನೆ ತೋರಿದ ಮಹಿಳಾ ಸಾಧಕಿಯರಾದ ಶ್ರೀಮತಿ ಜಯಲಕ್ಷ್ಮಿ ಅಜಿತ್, ಶ್ರೀಮತಿ ಜ್ಯೋತಿ ಮಹಾವೀರ್, ಶ್ರೀಮತಿ ರಕ್ಷಾ ಪ್ರಭಾತ್, ಶ್ರೀಮತಿ ವಿಜಯಲಕ್ಷ್ಮಿ ಹೇಮಚಂದ್ರ, ಶ್ರೀಮತಿ ಪ್ರಣಮ್ಯ ಅಶ್ವಿನ್ ಕುಮಾರ್, ಶ್ರೀಮತಿ ಕರ್ತವ್ಯ ಜೈನ್ ಇವರುಗಳನ್ನು ಸನ್ಮಾನಿಸಲಾಯಿತು. ಧಾರ್ಮಿಕ ಹಾಗೂ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು.
ವೇದಿಕೆಯಲ್ಲಿ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ ಇದರ ವಲಯ ನಿರ್ದೇಶಕರಾದ ಶ್ರೀಮತಿ ಸರೋಜ ಗುಣ ಪಾಲ್ ಜೈನ್, ವೇಣೂರು ಉಪಸ್ಥಿತರಿದ್ದರು.
ಹಾಗೂ ಜಿನವಾಣಿ ಮಹಿಳಾ ಸಮಾಜ, ಕಾರ್ಕಳ ಇದರ ಸಂಘದ ಸದಸ್ಯರು ಉಪಸ್ಥಿತರಿದ್ದರು. ಶ್ರೀಮತಿ ಸುಷ್ಮಾ ಇವರು ಧನ್ಯವಾದವಿತ್ತರು. ಶ್ರೀಮತಿ ವಿಜಯಲಕ್ಷ್ಮಿ ಹೇಮಚಂದ್ರ ಇವರು ಶಾಂತಿ ಮಂತ್ರ ಪಠಿಸಿದರು. ಶ್ರೀಮತಿ ಮಾಲತಿ ಪೃಥ್ವಿರಾಜ್ ಬಲ್ಲಾಳ್ ಮತ್ತು ಶ್ರೀಮತಿ ಸುಮಾಲಿನಿಯವರು ಕಾರ್ಯಕ್ರಮ ನಿರೂಪಿಸಿದರು.