ಜೈನ ಆಹಾರ ಮೇಳ

ಜೈನ ಆಹಾರ ಮೇಳ

ಪದ್ಮಾಂಬಾ ಮಹಿಳಾ ಸಮಾಜ, ದಾವಣಗೆರೆ ಯಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. " ಜೈನ ಆಹಾರ ಮೇಳ"ವನ್ನು ಆಯೋಜಿಸಲಾಗಿತ್ತು. ಶುಚಿ, ರುಚಿಯಾದ ತಿಂಡಿಗಳು ಬಾಯಲ್ಲಿ ನೀರೂರಿಸುವಂತೆ ಇದ್ದವು.ಒಕ್ಕೂಟದ ಅಧ್ಯಕ್ಷ ರಾದ ಶ್ರೀಮತಿ ಪದ್ಮಾ ಪ್ರಕಾಶ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಹರ್ಷ ನಾಗರಾಜ್, ಸಮಾಜದ ಸಂಸ್ಥಾಪಕರಾದ ಶ್ರೀಮತಿ ಉಷಾ  ಜೈಪ್ರಕಾಶ್,ಉಪಾಧ್ಯಕ್ಷ ರಾದ ಶ್ರೀಮತಿ ದೀಪಾ, ಖಜಾಂಚಿ  ಶ್ರೀಮತಿ ಚೇತನಾ, ಸಹಕಾರ್ಯದರ್ಶಿ ಶ್ರೀಮತಿ ಗೀತಾ ಹಾಗೂ ಹೆಚ್ಚು ಮಂದಿ ಸದಸ್ಯೆಯರು ಉಪಸ್ಥಿತರಿದ್ದರು.
ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮ ಯಶಸ್ವಿಯಾಯಿತು.