ಜೈನಧರ್ಮ- ಧರ್ಮಸ್ಥಳ ನಿಂದನೆ  : ಕೆಂಪಾದ ಮಲ್ಲಿಗೆ ನಾಡು

ಜೈನಧರ್ಮ- ಧರ್ಮಸ್ಥಳ ನಿಂದನೆ  : ಕೆಂಪಾದ ಮಲ್ಲಿಗೆ ನಾಡು

ಹೂವಿನಹಡಗಲಿ ಅ 12
ಜೈನಧರ್ಮ - ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯ, ಪೂಜ್ಯ ಶ್ರೀ ವೀರೇಂದ್ರ ಹೆಗಡೆ ಗುರಿಯಾಗಿಸಿಟ್ಟುಕೊಂಡು ನಿತ್ಯ ಅಪಪ್ರಚಾರ ನಿಂದನೆ ಕಾಯಕ ಮಾಡಿಕೊಂಡಿರುವ ಮುಟ್ಟಾಳರ ಹೆಡೆಮುರಿಕಟ್ಟಿ ಶಿಕ್ಷೆ ನೀಡಲು ಮಲ್ಲಿಗೆ ನಾಡಿನ ಸಮಸ್ತ ಜೈನ ಸಮಾಜ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆ ನೇತೃತ್ವವನ್ನು ಶ್ರೀ ಪಾರ್ಶ್ಶ್ವನಾಥ ಸ್ವಾಮಿ ಚಾರಿಟೇಬಲ್ ಟ್ರಸ್ಟ್, ಭಾರತೀಯ ಜೈನ ಮಿಲನ, ಶ್ರೀ ಜ್ವಾಲಮಾಲಿನಿ ಮಹಿಳಾ ಸಮಾಜ ವಹಿಸಿ ಪ್ರತಿಭಟನೆ ಯಶಸ್ವಿಯಾಗಿ ನೆರೆವೇರಿತು. ಶ್ರೀ ಪಾರ್ಶ್ಶ್ವನಾಥ ಸ್ವಾಮಿ ಜಿನ ಬಸದಿಯಿಂದ ಸಾಗಿದ ಪ್ರತಿಭಟನೆ ಹೂವಿನಹಡಗಲಿ ಪಟ್ಟಣದ ಮಿನಿ ವಿಧಾನ ಸೌಧ ತಹಸೀಲ್ದಾರ್ ಬಳಿ ಸಾಗಿ ತಹಸೀಲ್ದಾರ್ ಶ್ರೀ ಸಂತೋಷ ಕುಮಾರ ರವರಿಗೆ ಮನವಿ ಪತ್ರ ನೀಡಿ ಜೈನ ಧರ್ಮ, ಶ್ರೀ ಧರ್ಮಸ್ಥಳ, ಶ್ರೀ ವೀರೇಂದ್ರ ಹೆಗಡೆ ಕುರಿತು ಅಪಪ್ರಚಾರ ಮಾಡುತ್ತಿರುವ ದುಷ್ಟರಿಗೆ ಶಿಕ್ಷೆ ಕೊಡಲು ಸಭೆ ಅಗ್ರಹಿಸಿತು. ಈ ಸಮಾರಂಭದಲ್ಲಿ ಜೈನ ಸಮಾಜದ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಎಚ್ ಎಸ್, ಜೈನ ಮಿಲನ್ ಅಧ್ಯಕ್ಷರಾದ ಶ್ರೀ ಸಂತೋಷ ಜೈನ್, ಶ್ರೀ ಜ್ವಾಲಮಾಲಿನಿ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಪದ್ಮಾವತಿ ಎಮ್ ಡಿ  ಸಂಘ ಸಂಸ್ಥೆ ಪದಾಧಿಕಾರಿಗಳು ಮತ್ತು ಹೂವಿನಹಡಗಲಿ ಪಟ್ಟಣದ ಸದ್ ಭಕ್ತ ಜೈನ ಶ್ರಾವಕ ಶ್ರಾವಿಕಿಯರು ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಿದರು.

https://youtu.be/NeceqBeoXlw?si=afW-5sxE4Jz9xfry