ದಿನಾಂಕ 27-06-2026 ರಂದು ಧೀಮತಿ ಜೈನ ಮಹಿಳಾ ಸಮಾಜ, ಉಜಿರೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ದಿನಾಂಕ 27-06-2026 ರಂದು ಧೀಮತಿ ಜೈನ ಮಹಿಳಾ ಸಮಾಜ, ಉಜಿರೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಧೀಮತಿ ಜೈನ ಮಹಿಳಾ ಸಮಾಜ, ಉಜಿರೆ
🌸 ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ – ಕಾರ್ಯಕ್ರಮ ವರದಿ 🌸
ಇಂದು ದಿನಾಂಕ 27-06-2026 ರಂದು ಧೀಮತಿ ಜೈನ ಮಹಿಳಾ ಸಮಾಜ, ಉಜಿರೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು.
ಕಾರ್ಯಕ್ರಮವು ಕುಮಾರಿ ನಿಷ್ಠಾ ಜೈನ್ ಹಾಗೂ ಕುಮಾರಿ ದೀಪ್ತಾ ಜೈನ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಅಧ್ಯಕ್ಷೆ ಡಾ. ರಜತಾ ಪಿ. ಶೆಟ್ಟಿ ಅವರು ಸ್ವಾಗತ ಭಾಷಣ ಹಾಗೂ ಅಧ್ಯಕ್ಷೀಯ ವರದಿಯನ್ನು ಮಂಡಿಸಿದರು.
ಮುಖ್ಯ ಅತಿಥಿ ಶ್ರೀಮತಿ ಸೋನಿಯಾ ವರ್ಮಾ, ನಿಕಟ ಪೂರ್ವ ಅಧ್ಯಕ್ಷೆ, ಕಾರ್ಯದರ್ಶಿ, ಖಜಾಂಚಿ ಹಾಗೂ ನೂತನ ಅಧ್ಯಕ್ಷೆ, ಕಾರ್ಯದರ್ಶಿ ಮತ್ತು ಖಜಾಂಚಿಯವರು ದೀಪ ಪ್ರಜ್ವಲನೆ ನೆರವೇರಿಸಿದರು.
ನಿಕಟ ಪೂರ್ವ ಕಾರ್ಯದರ್ಶಿ ಶ್ರೀಮತಿ ದಿವ್ಯಾ ಪ್ರಧಾನ್ ಅವರು ತಮ್ಮ ಕಾರ್ಯ ವರದಿಯನ್ನು ಹಾಗೂ ನಿಕಟ ಪೂರ್ವ ಖಜಾಂಚಿ ಶ್ರೀಮತಿ ಸ್ಮಿತಾ ಪ್ರಶಾಂತ್ ಅವರು ಲೆಕ್ಕಪತ್ರ ಮತ್ತು ಆರ್ಥಿಕ ವ್ಯವಹಾರಗಳ ಸಂಕ್ಷಿಪ್ತ ವರದಿಯನ್ನು ಮಂಡಿಸಿದರು.
ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಸಾಧನೆಗೈದ ಕುಮಾರಿ ಲಾಸ್ಯ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ 18 ನೂತನ ಸದಸ್ಯೆಯರು ಮಹಿಳಾ ಸಮಾಜವನ್ನು ಸೇರ್ಪಡೆಗೊಂಡರು.
ನೂತನ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ಪ್ರವೀಣ್ ಕುಮಾರ್ ಅವರು ತಮ್ಮ ಭಾಷಣದಲ್ಲಿ ಸಮಾಜದ ಸದಸ್ಯರು ತಮಗೆ ನೀಡಿದ ಅವಕಾಶಕ್ಕಾಗಿ ಕೃತಜ್ಞತೆ ಸಲ್ಲಿಸಿ, ಎಲ್ಲರ ಸಹಕಾರದೊಂದಿಗೆ ಉತ್ತಮ ಸೇವೆ ಸಲ್ಲಿಸುವ ಭರವಸೆ ನೀಡಿದರು.
ಮುಖ್ಯ ಅತಿಥಿ ಹಾಗೂ ಗೌರವ ಅಧ್ಯಕ್ಷರಾಗಿರುವ ಶ್ರೀಮತಿ ಸೋನಿಯಾ ವರ್ಮಾ ಅವರು ಮಹಿಳೆಯರ ಕುಟುಂಬ, ಸಮಾಜ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿನ ಮಹತ್ವದ ಪಾತ್ರದ ಕುರಿತು ಪ್ರಬೋಧನಾತ್ಮಕವಾಗಿ ಮಾತನಾಡಿ, ಮಹಿಳಾ ಸಮಾಜದ ಸಾರ್ವಜನಿಕ ಮತ್ತು ಧಾರ್ಮಿಕ ಸೇವೆಗಳನ್ನು ಶ್ಲಾಘಿಸಿದರು. ಅಲ್ಲದೆ, ಹಿಂದಿನ ಪದಾಧಿಕಾರಿಗಳ ಸೇವೆಯನ್ನು ಅಭಿನಂದಿಸಿ, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಮಾಜಿ ಪದಾಧಿಕಾರಿಗಳು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಾಗೂ ದಾಖಲೆಗಳನ್ನು ಅಧಿಕೃತವಾಗಿ ಹಸ್ತಾಂತರಿಸಿದರು.
ನೂತನ ಕಾರ್ಯದರ್ಶಿ ಶ್ರೀಮತಿ ಸ್ಮೃತಿ ವಿನಯಚಂದ್ರ ಅವರು ವಂದನಾರ್ಪಣೆ ಸಲ್ಲಿಸಿದರು. ನೂತನ ಖಜಾಂಚಿ ಶ್ರೀಮತಿ ಉಲ್ಲಾಸಿನಿ ಉದಯ ಕುಮಾರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಸಮಾಜದ ಸದಸ್ಯೆ ಶ್ರೀಮತಿ ಶಶಿಪ್ರಭಾ ಅವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮವು ಸಾಮೂಹಿಕ ಶಾಂತಿ ಮಂತ್ರ ಪಠಣದೊಂದಿಗೆ ಸಮಾಪ್ತಿಗೊಂಡಿತು.
🙏 ಎಲ್ಲಾ ಸದಸ್ಯೆಯರ ಸಕ್ರಿಯ ಭಾಗವಹಿಸುವಿಕೆ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು. 🌸