ಬ್ರಾಹ್ಮಿ ಜೈನ ಮಹಿಳಾ ಸಮಾಜ -ವೇಣೂರು ನೂತನ ಪದಾಧಿಕಾರಿಗಳ ಪದಗ್ರಹಣ
ಬ್ರಾಹ್ಮಿ ಜೈನ ಮಹಿಳಾ ಸಮಾಜ -ವೇಣೂರು ನೂತನ ಪದಾಧಿಕಾರಿಗಳ ಪದಗ್ರಹಣ
ದಿನಾಂಕ 13.07.2025ರಂದು ಬ್ರಾಹ್ಮಿ ಜೈನ ಮಹಿಳಾ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಕಾಯ೯ಕ್ರಮ ಜರುಗಿತು. ನೂತನ ಅಧ್ಯಕ್ಷರಾಗಿ ಶ್ರೀಮತಿ ಸುನೀತಾ ಶಾಂತಿಪ್ರಸಾದ್ ಹಾಗೂ ಕಾಯ೯ದಶಿ೯ಯಾಗಿ ಶ್ರೀ ದೀಪಶ್ರೀ ಜೈನ್ ಮತ್ತು ಕೋಶಾಧಿಕಾರಿಯಾಗಿ ಶ್ರೀ ಸುಕನ್ಯ ಬಲ್ಲಾಳ್ ಆಯ್ಕೆಯಾದರು. ಮುಖ್ಯ ಅತಿಥಿಗಳಾಗಿ ಕಾಕ೯ಳ ಜಿನವಾಣಿ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಸುಮನಾಜಿ ಡಿ.ಅಧಿಕಾರಿ ಹಾಗೂ ಮೂಡಬಿದ್ರಿ ಸವ೯ಮಂಗಳ ಜೈನ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಯಶೋಧರ್ ಭಾಗವಹಿಸಿದ್ದರು. ಇವರು ಮಾತನಾಡಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಅಖಿಲ ಕನಾ೯ಟಕ ಮಹಿಳಾ ಒಕ್ಕೂಟದ ನಿದೇ೯ಶಕರಾದ ಶ್ರೀಮತಿ ಸರೋಜ ಗುಣಪಾಲ್ ಜೈನ್ ವಹಿಸಿದ್ದರು. ಗೌರವ ಉಪಸ್ಥಿತಿಯನ್ನು ಬ್ರಾಹ್ಮಿ ಜೈನ ಮಹಿಳಾ ಸಮಾಜದ ಸ್ಥಾಪಕ ಅಧ್ಯಕ್ಷರಾದ ಪ್ರಸನ್ನ ಆರ್.ಹೆಗ್ಡೆ ಹಾಗೂ ಶ್ರೀಮತಿ ರಾಜೇಶ್ವರಿ ವಿ.ಅಧಿಕಾರಿ ವಹಿಸಿದ್ದರು. ವಾಷಿ೯ಕ ಗತ ಸಭೆಯ ವರದಿಯನ್ನು ನಿಗ೯ಮಿತ ಕಾಯ೯ದಶಿ೯ಗಳಾದ ಶ್ರೀ ಆಶಾಲತಾ ಮಂಡಿಸಿದರು. ಹಾಗೆಯೇ ನಿಗ೯ಮಿತ ಕೋಶಾಧಿಕಾರಿ ಶ್ರೀಮತಿ ವಾಣಿ ವೃಷಭರಾಜ್ ಲೆಕ್ಕ ಪತ್ರ ಮಂಡಿಸಿದರು. ನಿಗ೯ಮಿತ ಅಧ್ಯಕ್ಷರಾದ ಶ್ರೀಮತಿ ಸರೋಜಾ ಗುಣಪಾಲ್ ಜೈನ್ ನೂತನ ಅಧ್ಯಕ್ಷರಾದ ಶ್ರೀಮತಿ ಸುನೀತಾ ಶಾಂತಿಪ್ರಸಾದ್ ಅವರಿಗೆ ಅಧಿಕಾರ ಹಸ್ತಾoತರಿಸಿದರು . ಕಾಯ೯ಕ್ರಮದಲ್ಲಿ ಶ್ರೀಮತಿ ಪದ್ಮಲತಾ ಮತ್ತು ಶ್ರೀಮತಿ ಸುನೀತಾ ಬಲ್ಲಾಳ್ ಪ್ರಾಥಿ೯ಸಿ, ನಿಗ೯ಮಿತ ಜತೆ ಕಾಯ೯ದಶಿಗಳಾದ ಶ್ರೀಮತಿ ಮಮತಾ ಸ್ವಾಗತಿಸಿದರು.ನೂತನ ಕಾಯ೯ದಶಿ೯ಗಳಾದ ಶ್ರೀ ದೀಪಶ್ರೀ ಜೈನ್ ಧನ್ಯವಾದವಿತ್ತರು. ಶ್ರೀಮತಿ ಸಂಧ್ಯಾ ಸುಕುಮಾರ್ ಹಾಗೂಶ್ರೀಮತಿ ಆಶಾಲತಾ ಜೈನ್ ರವರು ಕಾಯ೯ಕ್ರಮ ನಿರೂಪಿಸಿದರು.