ಮಕ್ಕಳ ಬೇಸಿಗೆ ಧಾರ್ಮಿಕ ಶಿಬಿರ -3( online) ಕಾರ್ಯಕ್ರಮ

ಮಕ್ಕಳ ಬೇಸಿಗೆ ಧಾರ್ಮಿಕ ಶಿಬಿರ -3( online) ಕಾರ್ಯಕ್ರಮ

prayer thumb
ಜೈ ಜಿನೇಂದ್ರ🙏
ಮಹಿಳಾ ಒಕ್ಕೂಟದ ಅಧ್ಯಕ್ಷರಿಗೂ ಹಾಗೂ ಕಾರ್ಯದರ್ಶಿಯವರಿಗೂ ವಂದನೆಗಳು. 
ನಿರಂಜನ ಲಹರಿ ಆ ಯೋಜನೆಯಲ್ಲಿ ಮಕ್ಕಳ ಬೇಸಿಗೆ ಧಾರ್ಮಿಕ ಶಿಬಿರ -3( online) ಕಾರ್ಯಕ್ರಮವು ಉನ್ನತಿ ಮಹಿಳಾ ಸಮಾಜ ಕಲ್ಯಾಣ ನಗರ ಬೆಂಗಳೂರು ಇವರ ಸಹಕಾರದೊಂದಿಗೆ 4-5- 2026 ಸೋಮವಾರದಿಂದ 10 -5-2026 ಭಾನುವಾರದವರೆಗೆ ಯಶಸ್ವಿಯಾಗಿ ನಡೆಯಿತು. 
ಸುಮಾರು ಇದರಲ್ಲಿ 45 ಮಕ್ಕಳು ಭಾಗವಹಿಸಿದ್ದರು. ಶಿಬಿರದ ಅಧ್ಯಾಪಕರಾಗಿ ಉನ್ನತಿ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಪದ್ಮಶ್ರೀ ಚಂದ್ರಪ್ರಕಾಶ್ ಹಾಗೂ ಮೈಸೂರಿನ ಸುಮಾ ಪ್ರಸಾದ್ ಅವರು ನಡೆಸಿಕೊಟ್ಟರು. 
ಈ ಕಾರ್ಯಕ್ರಮದ ಆಯೋಜಕರು ನಿರಂಜನ್ ಜೈನ್ ಕುದ್ಯಾಡಿ ಅವರು. ಭಾಗವಹಿಸಿದ್ದ 45 ಮಕ್ಕಳಿಗೂ ಉನ್ನತಿ ಮಹಿಳಾ ಸಮಾಜದ ವತಿಯಿಂದ ಪ್ರಶಸ್ತಿ ಪತ್ರವನ್ನು ಅಂಚೆ ಮೂಲಕ ಕಳಿಸಿಕೊಟ್ಟೆವು. 
ಮಕ್ಕಳ ಧಾರ್ಮಿಕಜ್ಞಾನಾರ್ಜನೆಗೆ ಅವಕಾಶ ಮಾಡಿಕೊಟ್ಟ ನಿರಂಜನ್ ಕುದ್ಯಾಡಿ ಅವರಿಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಹೃತ್ಪೂರ್ವಕ ವಂದನೆಗಳು💐🙏