ವೀರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘ ಇದರ 'ಆಟಿಡೊಂಜಿ ದಿನ'

ವೀರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘ ಇದರ 'ಆಟಿಡೊಂಜಿ ದಿನ'

ದಿನಾಂಕ 02.08.2026ರಂದು ವೀರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘ ಇದರ 'ಆಟಿಡೊಂಜಿ ದಿನ' ಅತ್ಯಂತ ಯಶಸ್ವಿಯಾಗಿ ಎಸ್‌.ಡಿ.ಎಂ.ಲಾ ಕಾಲೇಜು ಸಭಾಂಗಣದಲ್ಲಿ ಜರುಗಿತು. ಸುಮಾರು 65 ಕ್ಕೂಮಿಕ್ಕಿ ಖಾದ್ಯಗಳನ್ನು ಮಹಿಳೆಯರು ಮನೆಯಲ್ಲಿ ತಯಾರಿಸಿ ತಂದಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಮಹಿಳಾ ಸಂಘದ ಅಧ್ಯಕ್ಷರಾದ ಸುಮನ ಪೂವಣಿ ವಹಿಸಿದ್ದರು. ಪ್ರಸನ್ನ ವಿನಯ ಕುಮಾರ್ರವರು ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು. ಅಧ್ಯಕ್ಷರು ಮತ್ತು ಅತಿಥಿಗಳು ಚೆನ್ನೆಮಣೆಯನ್ನು  ಆಡುವುದರ ಮೂಲಕ ಮತ್ತು ಜೈನರ ಸಾಂಪ್ರದಾಯಿಕ ಸಿಹಿ ತಿಂಡಿಯಾದ ಕಟ್ಮಂಡಿಗೆಯನ್ನು  ತೆರೆಯುವುದರ ಮೂಲಕ ಆಟಿಡೊಂಜಿ  ದಿನವನ್ನು ಪ್ರಾರಂಭಿಸಿದರು.ಸದಸ್ಯೆಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಟ್ಟರು. ವಿವಿಧ ಆಟಗಳನ್ನು ಹಮ್ಮಿಕೊಳ್ಳಲಾಯಿತು.   ಸಂಘದ ಕಾರ್ಯದರ್ಶಿಗಳಾದ ಶಿಲ್ಪಾ ಸಂದೀಪ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.