ಸರ್ವ ಮಂಗಳ ಜೈನ ಮಹಿಳಾ ಸಂಘ( ರಿ) ಮೂಡಬಿದ್ರಿ ಇದರ ಮಾಸಿಕ ಸಮಾಲೋಚನೆ ಸಭೆ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮ.
ಸರ್ವ ಮಂಗಳ ಜೈನ ಮಹಿಳಾ ಸಂಘ( ರಿ) ಮೂಡಬಿದ್ರಿ ಇದರ ಮಾಸಿಕ ಸಮಾಲೋಚನೆ ಸಭೆ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮ.
ದಿನಾಂಕ 26.07.2025ನೇ ಶನಿವಾರ ಮಧ್ಯಾಹ್ನ ಕೋಟಿ ಬಸದಿಯ ಭಗವಾನ್ ನೇಮಿನಾಥ ಸ್ವಾಮಿಗೆ ಕ್ಷೀರಾಭಿಷೇಕ ಹಾಗೂ ಮಾತೆ ಕೂಶ್ಮಾಂಡಿನಿ ದೇವಿಗೆ ಪೂಜೆಯು ನಡೆಯಿತು. ಬಳಿಕ ದಿಗಂಬರ ಜೈನ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಕಟ್ಟಡದಲ್ಲಿ ಮಾಸಿಕ ಸಮಾಲೋಚನೆ ಸಭೆಯು ನಡೆಯಿತು. ವಿಶ್ವ ವೈದ್ಯರ ದಿನಾಚರಣೆಯ ಪ್ರಯುಕ್ತ ವೈದ್ಯಕೀಯ ಕ್ಷೇತ್ರದಲ್ಲಿ 33 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಶ್ರೀಮತಿ ಚಂದ್ರಿಕಾ ಎಸ್ ಹೆಗ್ಡೆ ಇವರನ್ನು ಅಭಿನಂದಿಸಲಾಯಿತು. "ಆಟಿಡೊಂಜಿ ದಿನ" ಕಾರ್ಯಕ್ರಮದ ಪ್ರಯುಕ್ತ ಮುಖ್ಯ ಅತಿಥಿಗಳಾದ ಶ್ರೀಮತಿ ನಿರ್ಮಲ ಕೃಷ್ಣರಾಜ ಶೆಟ್ಟಿ ಆಟಿ ತಿಂಗಳ ಮಹತ್ವದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಅಧ್ಯಕ್ಷರಾದ ಮಂಜುಳಾ ಯಶೋಧರ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲರನ್ನು ಸ್ಮರಿಸಿದರು . ವೇದಿಕೆಯಲ್ಲಿ ಹಿರಿಯರಾದ ಶ್ರೀಮತಿ ವೃಂದ ರಾಜೇಂದ್ರ ಮತ್ತು ಕೇಸರಿ ರವಿರಾಜ್ ಶೆಟ್ಟಿ, ಉಪಸ್ಥಿತರಿದ್ದರು. ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಮತಿ ಸುಧಾ ಪಾರ್ಶ್ವನಾಥ್ ರವರು ತುಳು ಒಗಟುಗಳನ್ನು ಕೇಳಿ ವಿಜೇತರಿಗೆ ಬಹುಮಾನವನ್ನು ನೀಡಿದರು. ಅದೃಷ್ಟದ ಅಡುಗೆ ಸ್ಪರ್ಧೆಯಲ್ಲಿ ಮೂರು ಜನರಿಗೆ ಬಹುಮಾನವನ್ನು ನೀಡಲಾಯಿತು. ಅಡುಗೆಯನ್ನು ಮಾಡಿ ತಂದ ಎಲ್ಲರಿಗೂ ಪ್ರೋತ್ಸಾಹದಾಯಕ ಬಹುಮಾನ ನೀಡಲಾಯಿತು. ದಿವ್ಯ ವೀರೇಂದ್ರ, ಪೂರ್ಣಿಮ ನಾಗೇಂದ್ರ, ಮತ್ತು ಆರತಿ ವಿರಾಜ್ ರವರು ಕಂಗಿಲು ಗೀತೆಯನ್ನು ಹಾಡಿದರು. ಕುಮಾರಿ ವಂಶಿಕ ಮತ್ತು ಕುಮಾರಿ ನಿಶ್ಚಿತ ತುಳು ಗೀತೆಗೆ ನೃತ್ಯ ಮಾಡಿದರು. ಸುರೇಖಾ ವಿಜಯಕುಮಾರ್ ದೇವರ ಪ್ರಾರ್ಥನೆ ಹಾಡಿದರು. ಪದ್ಮಜಾ ಶಾಂತಿ ರಾಜ್ ಕಂಬಳಿ ಎಲ್ಲರನ್ನು ಸ್ವಾಗತಿಸಿದರು. ಅನನ್ಯ ಪ್ರಜ್ವಲ್ ಧನ್ಯವಾದ ಮಾಡಿದರು. ಪದ್ಮಪ್ರಿಯ ಸೂರಜ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸುಮಾರು 70 ರೀತಿಯ ವಿವಿಧ ಆಹಾರ ಪದಾರ್ಥಗಳನ್ನು ತಮ್ಮ ಹಸ್ತದಿಂದಲೇ ನಮಗೆಲ್ಲರಿಗೂ ಉಣ ಬಡಿಸಿದರು.