ಹಂಸಗಾಮಿನಿ ಮಹಿಳಾ ಸಂಘ ಅಥಣಿ .
ಹಂಸಗಾಮಿನಿ ಮಹಿಳಾ ಸಂಘ ಅಥಣಿ .
ಜೈ ಜಿನೇಂದ್ರ🙏🏻🙏🏻
ಹಂಸಗಾಮಿನಿ ಮಹಿಳಾ ಸಂಘ ಅಥಣಿ .
ನಿನ್ನೆ ದಿನಾಂಕ 11.03.2026ರಂದು ಮಧ್ಯಾಹ್ನ ಸರಿಯಾಗಿ ಒಂದು ಗಂಟೆಗೆ ಹೋಟೆಲ್ R-VEG ನಲ್ಲಿಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು...
ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀಮತಿ ಲಾವಣ್ಯ ಬಲ್ಲಾಳ ಜೈನ್ ಅಧ್ಯಕ್ಷರು, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಬೆಂಗಳೂರು ಇವರು ಆಗಮಿಸಿ , ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ,ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಉನ್ನತವಾಗಿ ಬೆಳೆಯಬೇಕೆಂದು ತಮ್ಮ ಭಾಷಣದಲ್ಲಿ ತಿಳಿಸಿದರು..
ಅದೇ ರೀತಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಶ್ರೀದೇವಿ ಸುರೇಂದ್ರ ಮಗದುಮ್ ಸಹ ಶಿಕ್ಷಕಿಯರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಯರಗಟ್ಟಿ ಇವರು ಆಗಮಿಸಿದ್ದರು. ಇವರು 21ನೇ ಶತಮಾನದಲ್ಲಿ ಮಹಿಳೆಯಗಿರುವ ಸವಾಲುಗಳ ಬಗ್ಗೆ ವಿಷಯವನ್ನು ಮಂಡಿಸಿದರು....
ಹಂಸಗಾಮಿನಯ ಸಂಘದ ಸದಸ್ಯರು ಅನೇಕ ಸಾಂಸ್ಕೃತಿಕ ರೋಮಾಂಚಕಾರಿ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು..
ಹಂಸಗಾಮಿನೀಯ ಎಲ್ಲಾ ಆಡಳಿತ ಮಂಡಳಿಯ ಸದಸ್ಯರ ಸಹಕಾರದೊಂದಿಗೆ ,
ಶ್ರೀಮತಿ ಜಯಶ್ರೀ ಕಿಣಿಂಗೆ ಅವರ ಅಧ್ಯಕ್ಷತೆ ಮತ್ತು ಶೀಲಾ ಅರುಣ್
ಯಲಗುದ್ರಿ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂದಿತು....
ಶ್ರೀಮತಿ ದೀಪಾ ನಂದಗಾವ್ ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಮತಿ ಶರ್ಮಿಲಾ ಪಾಟೀಲ್ ಸ್ವಾಗತಿಸಿದರು ಹಾಗೂ ಶ್ರೀಮತಿ ವಿದ್ಯಾ
ವನಜೋಳ ವಂದಿಸಿದರು...